ಕುಂಬಳೆ: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಜಿಲ್ಲಾ ಸಂಘ ಕಾಸರಗೋಡು ಇದರ 2021-22 ನೇ ಸಾಲಿನ ಸ್ವಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರ್ಥಿಕ ಸಹಾಯ, ಅಭಿನಂದನೆ ಕಾರ್ಯಕ್ರಮ ನಡೆಯಲಿದೆ. ಸಮಾಜದ ಎಸ್‍ಎಸ್‍ಎಲ್‍ಸಿ ಯಲ್ಲಿ ತೇರ್ಗಡೆಯಾದ ಎಲ್ಲಾ ಮಕ್ಕಳಿಗೂ, ಪಿಯುಸಿ, ಪ್ಲಸ್ ಟು(ಕೇರಳ) ನಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಒಬ್ಬರಿಗೂ, ಟಿಟಿಸಿ/ಬಿಎಡ್/ಎಂಜಿನಿಯರಿಂಗ್/ಮೆಡಿಕಲ್/ಪಾಲಿಟೆಕ್ನಿಕ್ ವಿಷಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಒಬ್ಬೊಬ್ಬರಿಗೂ(ಅರ್ಜಿಯೊಂದಿಗೆ ವಾರ್ಷಿಕ ವರಮಾನ ಸರ್ಟಿಫಿಕೇಟ್ ಲಗತ್ತಿಸಬೇಕು) ಪುರಸ್ಕರಿಸಲಾಗುವುದು. ಜಿಲ್ಲಾ ಮಟ್ಟದ ಮತ್ತು ಮೇಲಿನ ಆಟೋಟ, ಸಾಂಸ್ಕøತಿಕ ಇತ್ಯಾದಿಗಳಲ್ಲಿ ಪ್ರಥಮ ಸ್ಥಾನ ಗಳಿಸಿದವರನ್ನು ಅಭಿನಂದಿಸಲಾಗುವುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಡಿಸೆಂಬರ್ 4. ಅರ್ಜಿ ನಮೂನೆಯನ್ನು ಆಯಾ ಉಪಸಂಘದ ಕಾರ್ಯದರ್ಶಿ ಅಥವಾ ಜಿಲ್ಲಾ ಸಂಘದ ಕಾರ್ಯದರ್ಶಿಯವರಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಸತೀಶ್ ಕುಮಾರ್ ದೋಣಿಬಾಗಿಲು, ಜಿಲ್ಲಾ ಕಾರ್ಯದರ್ಶಿ, ಜಿಲ್ಲಾ ಸಂಘ, ಮೊಬೈಲ್ ನಂಬರ್ 9895826642 ಗೆ ಸಂಪರ್ಕಿಸಬಹುದು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
0
ನವೆಂಬರ್ 27, 2022
Tags