ಕೊಚ್ಚಿ: ಗುರುವಾಯೂರ್ ದೇವಸ್ಥಾನದಲ್ಲಿ ಕೋರ್ಟ್ ಲ್ಯಾಂಪ್’(ದೀಪ) ಬಗ್ಗೆ ಹೈಕೋರ್ಟ್ ನ್ಯಾಯಾಂಗ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಕಾರ್ಯಕ್ರಮವನ್ನು ನಡೆಸದಂತೆ ತ್ರಿಶೂರ್ ಜಿಲ್ಲೆಯ ನ್ಯಾಯಾಂಗ ಅಧಿಕಾರಿಗಳಿಗೆ ಹೈಕೋರ್ಟ್ ಸೂಚಿಸಿದೆ. ಚಾವಕ್ಕಾಡ್ ಮುನ್ಸಿಫ್ ಕೋರ್ಟ್ ಬಾರ್ ಅಸೋಸಿಯೇಶನ್‍ನ ಸದಸ್ಯರನ್ನೊಳಗೊಂಡ ಸಂಘಟನಾ ಸಮಿತಿಯು ಗುರುವಾಯೂರ್ ದೇವಸ್ಥಾನದಲ್ಲಿ 'ಕೋರ್ಟ್ ಲ್ಯಾಂಪ್' ಅನ್ನು ಪ್ರತಿವರ್ಷ ನಡೆಸುತ್ತದೆ. ವಕೀಲರ ಸಂಘದ ಸದಸ್ಯರು ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನ್ಯಾಯಾಲಯ ವಿರೋಧಿಸುವುದಿಲ್ಲ. ಆದರೆ 'ಕೋರ್ಟ್ ಲ್ಯಾಂಪ್' ಹೆಸರು ಬಳಸುವುದು ಸರಿಯಲ್ಲ ಎಂದು ಹೈಕೋರ್ಟ್ ಹೇಳಿದೆ. ಇದರಿಂದ ನ್ಯಾಯಾಲಯಗಳು ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂಧಿಸಿವೆ ಎಂಬ ಭಾವನೆ ಮೂಡುತ್ತದೆ ಎಂದೂ ಹೈಕೋರ್ಟ್ ಬೆಟ್ಟು ಮಾಡಿದೆ. ಈ ಕುರಿತು ಹೈಕೋರ್ಟ್ ಜಂಟಿ ರಿಜಿಸ್ಟ್ರಾರ್ ಹೇಮಲತಾ ಪತ್ರ ಬರೆದಿದ್ದಾರೆ. ನ್ಯಾಯಾಲಯದ ದೀಪಾಲಂಕಾರಕ್ಕೆ ನ್ಯಾಯಾಧೀಶರು ಹಾಜರಾಗುವ ಅಗತ್ಯವಿಲ್ಲ ಎಂದು ರಿಜಿಸ್ಟ್ರಾರ್ ಪತ್ರದಲ್ಲಿ ತಿಳಿಸಲಾಗಿದೆ.
ಹೈಕೋರ್ಟ್‍ನಲ್ಲಿ ತ್ರಿಶೂರ್ ಜಿಲ್ಲಾ ಉಸ್ತುವಾರಿಯಾಗಿರುವ ನ್ಯಾಯಮೂರ್ತಿ ಎ.ಕೆ.ಜಯಶಂಕರನ್ ನಂಬಿಯಾರ್ ಅವರು ಈ ಸೂಚನೆ ನೀಡಿದ್ದಾರೆ. ಜಾತ್ಯತೀತ ಪ್ರಜಾಸತ್ತಾತ್ಮಕ ಸಂಸ್ಥೆಗಳಾದ ನ್ಯಾಯಾಲಯಗಳು ಯಾವುದೇ ನಿರ್ದಿಷ್ಟ ಧರ್ಮವನ್ನು ಪ್ರಚಾರ ಮಾಡುವ ಚಟುವಟಿಕೆಗಳಲ್ಲಿ ತೊಡಗುವುದು ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೆ ವಕೀಲರ ಸಂಘದ ಸದಸ್ಯರಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿರ್ಬಂಧ ವಿಧಿಸಿಲ್ಲ.
ಗುರುವಾಯೂರ್ ದೇವಸ್ಥಾನದಲ್ಲಿ ಕೋರ್ಟ್ ಲ್ಯಾಂಪ್ ಗೆ ನಿಷೇಧ: ನ್ಯಾಯಾಧೀಶರು ಉಪಕ್ರಮವನ್ನು ತೆಗೆದುಕೊಳ್ಳಬಾರದು ಎಂದ ಹೈಕೋರ್ಟ್
0
ನವೆಂಬರ್ 02, 2022