ಲಖನೌ: ಮೇನ್ಪುರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸಮಾಜವಾದಿ ಪಕ್ಷದ(ಎಸ್‍ಪಿ) ಅಭ್ಯರ್ಥಿಯಾಗಿ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ, ಅಖಿಲೇಶ್ ಯಾದವರ್ ಅವರ ಪತ್ನಿ ಡಿಂಪಲ್ ಯಾದವ್ ಅಖಾಡಕ್ಕಿಳಿಯುತ್ತಿದ್ದಾರೆ.
ಸಮಾಜವಾದಿ ಪಕ್ಷದ ಸಂಸ್ಥಾಪಕ, ಉತ್ತರ ಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಅವರು ಕಳೆದ ಅ.10ರಂದು ನಿಧನರಾದರು.
ಇವರ ಅಗಲಿಕೆ ಹಿನ್ನೆಲೆ ತೆರವಾದ ಮೇನ್ಪುರಿ ಎಂಪಿ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಮಾವ ಪ್ರತಿನಿಧಿಸಿದ್ದ ಮಣಿಪುರ ಕ್ಷೇತ್ರವನ್ನ ಇನ್ನೊಬ್ಬರ ಪಾಲಾಗದಂತೆ ನೋಡಿಕೊಳ್ಳಲು ಸೊಸೆಯನ್ನೇ ಅಭ್ಯರ್ಥಿಯನ್ನಾಗಿ ಪಕ್ಷವು ಘೋಷಿಸಿದೆ.
ಕನೌಜ್ ಕೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಡಿಂಪಲ್ ಯಾದವ್, 2019ರ ಚುನಾವಣೆ ಸೋಲುಂಡಿದ್ದರು. ಇದೀಗ ಮಾವ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮೇನ್ಪುರಿ ಕ್ಷೇತ್ರದ ಉಪಚುನಾವಣೆ ಡಿ.5ಕ್ಕೆ ನಡೆಯಲಿದ್ದು, 8ರಂದು ಮತ ಎಣಿಕೆ ನಡೆಯಲಿದೆ.