HEALTH TIPS

ಕರ್ನಾಟಕ ಪ.ಪಂ.ಮರಾಟಿ ವಧುವಿಗೆ ಕೇರಳದಲ್ಲಿ ಜನನಿ ಜನ್ಮರಕ್ಷಾ ಯೋಜನೆ ವಿತರಣೆಗೆ ಶ್ರಮಿಸಿದ ಶ್ರೀಶಾರದಾ ಮರಾಟಿ ಸಮಾಜ ಸೇವಾ ಸಂಘಕ್ಕೆ ಅಭಿನಂದನೆ


         ಪೆರ್ಲ: ಕೇರಳ ರಾಜ್ಯದ ಪರಿಶಿಷ್ಟ ಪಂಗಡ ಮರಾಟಿಗರಲ್ಲಿ ಕರ್ನಾಟಕ ದಿಂದ ಕೇರಳದ ಹುಡುಗನನ್ನು ವಿವಾಹವಾದ ಮರಾಟಿ ಹುಡುಗಿಗೂ ಜನನಿ ಜನ್ಮರಕ್ಷಾ ಸವಲತ್ತುಗಳು ಲಭ್ಯವಾಗುವಂತೆ ಕೇರಳ ರಾಜ್ಯದ ಎಸ್.ಸಿ./ಎಸ್.ಟಿ. ಕಮಿಷನ್‍ನಿಂದ ಮಹತ್ವದ ತೀರ್ಪು ಕಲ್ಪಿಸಲು ಪ್ರಯತ್ನ ನಡೆಸಿದ ಶ್ರೀಶಾರದಾ ಮರಾಟಿ ಸಮಾಜ ಸೇವಾ ಸಂಘಕ್ಕೆ ಸಮಾಜ ಬಾಂಧವರು ಅಭಿನಂದನೆ ಸಲ್ಲಿಸಿದ್ದಾರೆ.
            ಕೇರಳ ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡದ ಗರ್ಭಿಣಿ ಮಹಿಳೆಯರು ಮತ್ತು ಹೊಟ್ಟೆಯಲ್ಲಿರುವ ಮಗುವಿನ ಆರೈಕೆಗಾಗಿ ಪೌಷ್ಟಿಕ ಆಹಾರವನ್ನು ಒದಗಿಸಿ ಅಮ್ಮ ಮತ್ತು ಮಗುವಿನ ಆರೋಗ್ಯ ಕಾಪಾಡಲು ಆರ್ಥಿಕ ಧನಸಹಾಯ ಒದಗಿಸುತ್ತದೆ. ಪೌಷ್ಟಿಕಾಂಶ ಹೊಂದಿದ ವಸ್ತುಗಳ ವಿತರಣೆ ಇತ್ಯಾದಿಗಳನ್ನು  'ಜನನಿ ಜನ್ಮ ರಕ್ಷಾ" ಕಾರ್ಯಕ್ರಮದಂತೆ ವಿತರಿಸುತ್ತಿದ್ದೂ ಇದಕ್ಕೆ ಕೇರಳಕ್ಕೆ ಮದುವೆಯಾಗಿ ಬರುವ ಕರ್ನಾಟಕ ಮರಾಟಿ ಹುಡುಗಿಯನ್ನು ಪರಿಗಣಿಸುತ್ತಿರಲಿಲ್ಲ.  ಸಾಮಾಜಿಕ ಕಾರ್ಯಕರ್ತ  ಶ್ರೀಶಾರದಾ ಮರಾಟಿ ಸಮಾಜ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಣ ಪುಟ್ಟ ನಾಯ್ಕ್  ಪೆರಿಯಾಳ್ತಡ್ಕ ಅವರು ಕೇರಳದ ಎಸ್.ಸಿ.ಎಸ್.ಟಿ ಕಮಿಷನ್  ಗೆ 2017 ರಲ್ಲಿ ಮನವಿ ಸಲ್ಲಿಸಿದ್ದರು. ಆ ಮನವಿಗೆ  5 ವರ್ಷ ಗಳ ನಂತರ ಸ್ಪಂದಿಸಿದ ಕೇರಳದ ಎಸ್.ಸಿ/ಎಸ್.ಟಿ. ಕಮಿಷನ್ 27.5.2022 ರಂದು ಕಾಸರಗೋಡಿನಲ್ಲಿ ಅದಾಲತ್ ನಡೆಸಿತ್ತು. ಈ ಸಂದರ್ಭದಲ್ಲಿ ಪುಟ್ಟ ನಾಯ್ಕ್ ರ ಅಸೌಖ್ಯದ ಕಾರಣ  ಪ್ರಸ್ತುತ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಬಾರಿಕ್ಕಾಡ್, ಡಾ. ಶಿವ ನಾಯ್ಕ್. ಪುಟ್ಟ ನಾಯ್ಕ್ ಪೆರಿಯಲ್ತಡ್ಕ, ಬಾಲಕೃಷ್ಣ ನಾಯ್ಕ್ ಏಳ್ಕಾನ ಮತ್ತು  ಪುಷ್ಪ ಅಮ್ಮೆಕ್ಕಳ ಅವರು ಅದಾಲತ್‍ನಲ್ಲಿ ಭಾಗವಹಿಸಿ ಈ ಬಗ್ಗೆ ಸಮಗ್ರ ವಾದ ಮಂಡಿಸಿತ್ತು. ಇದರಂತೆ   ಕಮಿಷನ್ ಈ ಸಮಸ್ಯೆಯನ್ನು ಕೂಲಂಕಷವಾಗಿ ಪರಿಶೀಲಿಸಿ 13.10.2022 ರಂದು ಕೇರಳ ಸರ್ಕಾರದ ಪರಿಶಿಷ್ಟ ಪಂ.ಇಲಾಖೆಗೆ ಆರ್ಥಿಕ ವಾಗಿ ಹಿಂದುಳಿದ ಪರಿಶಿಷ್ಟ ಪಂಗಡದ ಕರ್ನಾಟಕ ದಿಂದ ಮದುವೆ ಯಾಗಿ ಬಂದ ಮರಾಟಿ ಹುಡುಗಿಯರಿಗೂ ಜನನಿ ಜನ್ಮ ರಕ್ಷಾ ಪದ್ದತಿಯ  ಸೌಲಭ್ಯ ಗಳನ್ನು ನೀಡುವಂತೆ  ಆದೇಶ ಹೊರಡಿಸಿದೆ. ಇದಕ್ಕಾಗಿ ಹೋರಾಟ ನಡೆಸಲು ಮೆಮೆರೊಂಡಮ್ ತಯಾರಿಸಿದ ಡಾ.ಬಿ.ಜಿ.ನಾಯ್ಕ್ ಅವರನ್ನು ಅಭಿನಂದಿಸಲಾಗಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries