ಮಧೂರು: ಶಬರಿಮಲೆಯ ನಿಯೋಜಿತ ಮುಖ್ಯ ಅರ್ಚಕ ಬ್ರಹ್ಮಶ್ರೀ ಕೊಟ್ಟಾರಂ ಜಯರಾಮನ್ ನಂಬೂದಿರಿ ಸೋಮವಾರ ಜಿಲ್ಲೆಯ ವಿವಿಧ ದೇವಾಲಯಗಳು, ಮಂದಿರಗಳಿಗೆ ಭೇಟಿ ನೀಡಿ, ಶ್ರೀದೇವರ ದರ್ಶನ ಪಡೆದರು. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಅರ್ಚಕರನ್ನು ದೇವಸ್ಥಾನ ಸಮಿತಿ ಪದಾದಿಕಾರಿಗಳು ಪೂರ್ಣಕುಂಭದೊಂದಿಗೆ ಬರಮಾಡಿಕೊಮಡರು. ಶ್ರೀದೇವರ ದರ್ಶನ ಪಡೆದು, ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ನಂತರ ಪರಕ್ಕಿಲ ಶ್ರೀ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಿದರು. ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನದ ಪ್ರಧಾನ ಅರ್ಚಕನರಾಗಿ ನಿಯುಕ್ತರಾಗುತ್ತಿದ್ದಂತೆ ರಾಜ್ಯದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿರುವ ಜಯರಾಮನ್ ನಂಬೂದಿರಿ ಅವರು, ಕಾಸರಗೋಡು ಜಿಲ್ಲೆಯ ವಿವಿಧ ದೇಗುಲಗಳ ಭೇಟಿ ಹಮ್ಮಿಕೊಂಡಿದ್ದರು.
ಇದಕ್ಕೂ ಮೊದಲು ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರ, ಪಾಂಬಾಚ್ಚಿಕಡವು ಶ್ರೀ ಅಯ್ಯಪ್ಪ ಮಂದಿರ ಸೇರಿದಂತೆ ವಿವಿಧ ದೇಗುಲಗಳಿಗೆ ಭೇಟಿ ನೀಡಿದರು.
ಶಬರಿಮಲೆ ನಿಯೋಜಿತ ಮುಖ್ಯ ಅರ್ಚಕ ಜಯರಾಮನ್ ನಂಬೂದಿರಿ ಮಧೂರು ಕ್ಷೇತ್ರಕ್ಕೆ ಭೇಟಿ
0
ನವೆಂಬರ್ 07, 2022