ನವದೆಹಲಿ: ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಪಿಟಿ ಉಷಾ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 10 ರಂದು ಅಧಿಕೃತ ಘೋಷಣೆ ಹೊರಬೀಳಲಿದೆ.
ಪ್ರಸ್ತುತ ಪಿ.ಟಿ.ಉಷಾ ಅವರು ರಾಜ್ಯಸಭಾ ಸದಸ್ಯೆಯಾಗಿದ್ದಾರೆ.ಈ ಹಿಂದೆ ಉಷಾ ಅವರು ಏಷ್ಯನ್ ಅಥ್ಲೆಟಿಕ್ ಫೆಡರೇಶನ್ ಮತ್ತು ಇಂಡಿಯನ್ ಅಥ್ಲೆಟಿಕ್ ಫೆಡರೇಶನ್ ವೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು.
ಅಥ್ಲೀಟ್‍ಗಳು ಮತ್ತು ರಾಷ್ಟ್ರೀಯ ಒಕ್ಕೂಟಗಳ ಬೆಂಬಲದೊಂದಿಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಇದೆ ಎಂದು ಅವರು ಮೊನ್ನೆ ಹೇಳಿದ್ದರು. ಇದೇ ವೇಳೆ ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿ, ‘ಐತಿಹಾಸಿಕÀ ಸುವರ್ಣ ಪುತ್ರಿಗೆ ಅಭಿನಂದನೆಗಳು’ ಎಂದು ಟ್ವೀಟ್ ಮಾಡಿದ್ದಾರೆ.
ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷೆಯಾಗಲಿದ್ದಾರೆ ಪಿಟಿ ಉಷಾ
0
ನವೆಂಬರ್ 27, 2022
Tags