ಪೆರ್ಲ: ನೀಲೇಶ್ವರದ ಇ.ಎಂ.ಎಸ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ಶಾಲಾ ಕ್ರೀಡೋತ್ಸವದಲ್ಲಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಗೆ ಮೂರು ಪ್ರಶಸ್ತಿ ಲಭಿಸಿದೆ. ಜಾವೆಲಿನ್ ತ್ರೋ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಶ್ರಾವ್ಯಾ ಬಿ. ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಈಕೆ ಬಜಕೂಡ್ಲು ವಸಂತಕುಮಾರ್-ಉಷಾ ದಂಪತಿ ಪುತ್ರಿ. ಸಬ್‍ಜೂನಿಯರ್ ಬಾಲಕರ ವಿಭಾಗದ ಡಿಸ್ಕಸ್ ತ್ರೋ ಸ್ಪರ್ಧೆಯಲ್ಲಿ ದೀಪೇಶ್ ಹಾಗೂ ಶಾಟ್‍ಪುಟ್ ಎಸೆತದಲ್ಲಿ ಫಾತಿಮತ್ ಹಿನಾನಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಕಾಟುಕುಕ್ಕೆ ತರಬೇತಿ ನೀಡಿದ್ದಾರೆ.
ಶಾಲಾ ಕ್ರೀಡೋತ್ಸವ: ಜಾವೆಲಿನ್ ತ್ರೋ ಸ್ಪರ್ಧೆಯಲ್ಲಿ ಪ್ರಥಮ
0
ನವೆಂಬರ್ 18, 2022