HEALTH TIPS

ಮೋದಿ 'ಸ್ವಯಂಸೇವಕ' ಅಷ್ಟೇ, ಅವರ ಸ್ವತಂತ್ರ ಕೆಲಸಗಳನ್ನು ಆರ್‌ಎಸ್‌ಎಸ್ ನಿಯಂತ್ರಿಸುವುದಿಲ್ಲ: ಭಾಗವತ್

 

              ಜಬಲಪುರ್ : ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ  ಸ್ವಯಂ ಸೇವಕರಾಗಿದ್ದರೂ, ಅವರ ಸ್ವತಂತ್ರ ಕೆಲಸಗಳನ್ನು ಸಂಘ ನಿಯಂತ್ರಿಸುವುದಿಲ್ಲ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.

                  ಇಲ್ಲಿನ ಸ್ಥಳೀಯ ಸಮುದಾಯದ ಪ್ರಮುಖರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಭಾಗವತ್ ಅವರು, 
                "ಸಂಘದ ಹೆಸರು ಬಂದಾಗ, ಜನ ಮೋದಿ ಜಿ ಅವರನ್ನು ನೆನಪಿಸಿಕೊಳ್ಳುತ್ತಾರೆ. ಮೋದಿ ಜಿ ನಮ್ಮ `ಸ್ವಯಂಸೇವಕ' ಅಷ್ಟೇ. ಸ್ವತಂತ್ರವಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಸಂಘ ನಿಯಂತ್ರಿಸುವುದಿಲ್ಲ ಎಂದು ತಿಳಿಸಿದರು.

            ಯಾರಾದರೂ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವಾಗ ಜನ ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ಬಗ್ಗೆಯೂ ಯೋಚಿಸುತ್ತಾರೆ. ಆ ಸಂಘಟನೆಯಲ್ಲಿಯೂ ನಮ್ಮ ಸ್ವಯಂಸೇವಕರು ಇದ್ದಾರೆ ಮತ್ತು ಅವರ ಚಿಂತನೆಯೂ ಇದೇ ಆಗಿದೆ ಎಂದು ಅವರು ಹೇಳಿದರು.

                 "ಆದರೆ ಇವೆಲ್ಲವೂ ಸಂಘವಲ್ಲ. ಅವರು ತಮ್ಮದೇ ಆದ ಕೆಲಸವನ್ನು ಮಾಡುತ್ತಿದ್ದಾರೆ. ಸಂಘ ಸಹ ತನ್ನದೇ ಆದ ಸ್ವತಂತ್ರ ಕೆಲಸವನ್ನು ಮಾಡುತ್ತಿದೆ" ಎಂದು ಭಾಗವತ್ ಸ್ಪಷ್ಟಪಡಿಸಿದರು.

                     ಆರ್‌ಎಸ್‌ಎಸ್ ನೊಂದಿಗೆ ಹಲವು ವ್ಯಕ್ತಿಗಳು(ಸ್ವಯಂಸೇವಕರಾಗಿದ್ದವರು) ಸಂಪರ್ಕವನ್ನು ಹೊಂದಿದ್ದಾರೆ. ಕೆಲವೊಮ್ಮೆ ಸಂಘವು ಒಳ್ಳೆಯ ಉದ್ದೇಶಕ್ಕಾಗಿ ಅವರಿಗೆ ಸಹಾಯ ಮಾಡುತ್ತದೆ. ಆದರೆ ಅವರ ಮೇಲೆ ಸಂಘ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ನಿಯಂತ್ರಣ ಹೊಂದಿರುವುದಿಲ್ಲ" ಎಂದು ಭಾಗವತ್ ಒತ್ತಿ ಹೇಳಿದ್ದಾರೆ.

                 ಹಿಂದೂ ಧರ್ಮವು ಕೇವಲ ಒಂದು ಧರ್ಮವಲ್ಲ. ಅದು ಜೀವನ ವಿಧಾನವಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries