ಕಾಸರಗೋಡು: ಅರ್ಬುದ ರೋಗದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜಾರಿಗೊಳಿಸಲಿರುವ ಕ್ಯಾನ್ಸರ್ ಕೇರ್ ಯೋಜನೆಗೆ ಮುಳಿಯಾರಿನಲ್ಲಿ ಚಾಲನೆ ನೀಡಲಾಯಿತು. ಮೊದಲ ಹಂತದಲ್ಲಿ ಮುಳಿಯಾರ್, ಚೆಂಗಳ, ಮೊಗ್ರಾಲ್ ಪುತ್ತೂರು, ದೇಲಂಪಾಡಿ, ಕಾರಡ್ಕ ಗ್ರಾಮ ಪಂಚಾಯಿತಿಗಳ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಯಿತು.
ನಂತರ ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಸಿಡಿಎಸ್ ಮತ್ತು ಎಡಿಎಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಮೂಲಭೂತ ತರಬೇತಿಯನ್ನು ಪೂರ್ಣಗೊಳಿಸಿದ ಸ್ವಯಂಸೇವಕರು ಗ್ರಾಮ ಮಟ್ಟದಲ್ಲಿ ಆರೋಗ್ಯ ತರಗತಿಗಳನ್ನು ಆಯೋಜಿಸುವರು. ಮಲಬಾರ್ ಕ್ಯಾನ್ಸರ್ ಕೇಂದ್ರದಿಂದ ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರು ತರಗತಿಗಳನ್ನು ನಡೆಸುತ್ತಿದ್ದಾರೆ. ಕ್ಯಾನ್ಸರ್ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಪರೀಕ್ಷಿಸುತ್ತಾರೆ ಮತ್ತು ಬ್ಲಾಕ್ ಮಟ್ಟದ ಕ್ಯಾನ್ಸರ್ ನಿಯಂತ್ರಣ ಸಮಿತಿಯ ಸಹಾಯದಿಂದ ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆ ಅಗತ್ಯವಿದ್ದಲ್ಲಿ, ಇದಕ್ಕೆ ವ್ಯವಸ್ಥೆಯನ್ನೂ ಸಿದ್ಧಪಡಿಸಲಾಗುವುದು. ಬ್ಲಾಕ್ ಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ವೈದ್ದಾಧಿಕಾರಿ ಡಾ.ಶಮೀಮಾ ತನ್ವೀರ್ ಹಾಗೂ ಆರೋಗ್ಯ ಮೇಲ್ವಿಚಾರಕ ಪಿ.ಕುಞÂಕೃಷ್ಣನ್ ನಾಯರ್ ತರಗತಿ ನಡೆಸಿದರು. ನ. 20ಕ್ಕೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತರಬೇತಿ ಪೂರ್ಣಗೊಳ್ಳಲಿದೆ. ಕಿರಿಯ ಆರೋಗ್ಯ ನಿರೀಕ್ಷಕರಾದ ಥಾಮಸ್, ಲತಿಕಾ ಮೇಳತ್ ಹಾಗೂ ಜಿಬಿ ಉಪಸ್ಥಿತರಿದ್ದರು.
ಕ್ಯಾನ್ಸರ್ ಕೇರ್ ಯೋಜನೆಗೆ ಕಾಸರಗೋಡು ಮುಳಿಯಾರಿನಲ್ಲಿ ಚಾಲನೆ
0
ನವೆಂಬರ್ 18, 2022
Tags