ಬದಿಯಡ್ಕ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ಬಗ್ಗೆ ಸಚಿತ್ರ ಮಾಹಿತಿಯನ್ನು ಒಳಗೊಂಡ ನಾಲ್ಕು ಪುಟಗಳ ವಿಶೇಷ ಪುರವಣಿಯನ್ನು ಸಮಾರೋಪ ಸಮಾರಂಭ ವೇದಿಕೆಯಲ್ಲಿ ಮಂಜೇಶ್ವರ ಶಾಸಕ ಎಂ.ಕೆ ಎಂ ಅಶ್ರಫ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕುಂಬ್ಡಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಹಮೀದ್ ಪೊಸೋಳಿಕೆ, ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ.ಎಸ್, ಕುಂಬ್ಡಾಜೆ ಗ್ರಾಮ ಪಂಚಾಯತಿ ವಿದ್ಯಾಭ್ಯಾಸ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ ಸಂಜೀವ ಶೆಟ್ಟಿ, ಚಲನಚಿತ್ರ ನಿರ್ದೇಶಕ ಕಿರಣ್‍ರಾಜ್, ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಪ್ರಾಂಶುಪಾಲ ಸತೀಶ್ ವೈ, ಅಗಲ್ಪಾಡಿ ವಿದ್ಯಾಸಂಸ್ಥೆಯ ಪ್ರಬಂಧಕ ನಾರಾಯಣ ಶರ್ಮ ಬಳ್ಳಪದವು, ಮುಖ್ಯೋಪಾಧ್ಯಾಯ ಗಿರೀಶ್, ಬೆಳ್ಳೂರು ಶಾಲಾ ಪ್ರಾಂಶುಪಾಲ ಯತೀಶ್ ಕುಮಾರ್ ರೈ,
ಆದೂರು ಸರ್ಕಲ್ ಇನ್‍ಸ್ಪೆಕ್ಟರ್ ಅನಿಲ್ ಕುಮಾರ್, ಶಾಲಾ ಅಧ್ಯಾಪಕರಾದ ರಾಜಶೇಖರ್, ಶಶಿಕಾಂತ್ ಬಲ್ಲಾಳ್, ಹರಿನಾರಾಯಣ, ಪುರವಣಿ ಸಂಯೋಜಕ ರಾಮಚಂದ್ರ ಬಲ್ಲಾಳ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಕುಂಬಳೆ ಉಪಜಿಲ್ಲಾ ಕಲೋತ್ಸವ: ವಿಶೇಷ ಪುರವಣಿ ಬಿಡುಗಡೆ
0
ನವೆಂಬರ್ 25, 2022