ಕುಂಬಳೆ: ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಪ್ರತ್ಯಕ್ಷ ದೇವರೆಂದೇ ಖ್ಯಾತಿ ಪಡೆದಿದ್ದ ದೈವಾಂಶ ಸಂಭೂತ ಮೊಸಳೆ'ಬಬಿಯಾ'ಸಂಸ್ಮರಣೆ ಮತ್ತು ಸಾಮೂಹಿಕ ಅನ್ನಸಂತರ್ಪಣಾ ಕಾರ್ಯ ನ. 19ರಂದು ದೇವಸ್ಥಾನದಲ್ಲಿ ಜರುಗಲಿದೆ.
ದೇವಸ್ಥಾನದ ತಂತ್ರಿವರ್ಯ ಗಣೇಶ ತಂತ್ರಿ ದೇಲಂಪಾಡಿ ಅವರು ಸಂಸ್ಮರಣಾ ಕಾರ್ಯದ ನೇತೃತ್ವ ವಹಿಸುವರು. ಬೆಳಗ್ಗೆ 10ಕ್ಕೆ ದೇವಸ್ತಾನ ಸಭಾಂಗಣದಲ್ಲಿ ಬಬಿಯಾ ಸಂಸ್ಮರಣೆ ಹಾಗೂ ಮಧ್ಯಾಹ್ನ ವಿಶೇಷ ಅನ್ನದಾನವಿರುವುದಾಗಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ. ದೇವಸ್ಥಾನದ ನೈವೇದ್ಯವನ್ನಷ್ಟೆ ಸೇವಿಸಿಕೊಂಡು, ಭಕ್ತಾದಿಗಳಿಗೆ ದರ್ಶನ ಕರೂನಿಸುತ್ತಿದ್ದ ಬಬಿಯಾ ಮೊಸಳೆ ಅ. 9ರಂದು ವಯೋಸಹಜ ಅಸೌಖ್ಯದಿಂದ ಮೃತಪಟ್ಟಿತ್ತು.
ಅನಂತಪುರ ಕ್ಷೇತ್ರದ ಮೊಸಳೆ ಬಬಿಯಾ ಸಂಸ್ಮರಣೆ, ವಿಶೇಷ ಅನ್ನದಾನ
0
ನವೆಂಬರ್ 16, 2022