ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವದ್ಧಿ ಕಾಮಗಾರಿ ಅಂಗವಾಗಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ವೇಳೆ ಪ್ರಯಾಣಿಕರಿಗೆ ತೊಂದರೆ-ಅಪಘಾತಗಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕಾಸರಗೋಡು ಘಟಕ ಆಗ್ರಹಿಸಿದೆ. ಹೊಸ ಬಸ್ ನಿಲ್ದಾಣದೊಳಗೆ ವಾಹನಗಳು ಸಂಚರಿಸಬೇಕು, ವ್ಯಾಪಾರ ಸಂಸ್ಥೆಗಳಿಗೆ ಬರುವ ಸಾರ್ವಜನಿಕರಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಗಿದೆ.
ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ವಾರ್ಷಿಕ ಸಭೆಯನ್ನು ಕಾರ್ಯದರ್ಶಿ ಕೆ.ಎಚ್. ಅಹಮದ್ ಉದ್ಘಾಟಿಸಿದರು. ಪ್ರಮೋದ್ ಅಧ್ಯಕ್ಷತೆ ವಹಿಸಿದ್ದರು. ಹನೀಫ ತಾಷ್ಕಂಟ್, ರಿಯಾಝ್ ಚೌಕಿ, ಪ್ರಕಾಶ, ದೀಪು ಕಡಪ್ಪುರÀ ಮುಂತಾದವರು ಮಾತನಾಡಿದರು.
ಘಟಕದ ಅಧ್ಯಕ್ಷರಾಗಿ ಉಮೇಶ್ ಎಂ.ಸಾಲಿಯಾನ್ ಹಾಗೂ ಕಾರ್ಯದರ್ಶಿಯಾಗಿ ಮೋಹನ ನಾಯ್ಕ್ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ರಮೀಝ್, ರಫೀಕ್ (ಉಪಾಧ್ಯಕ್ಷರು), ಸುನೀಲ್, ರಘುನಾಥ್ (ಉದ್ಯೋಗ ಕಾರ್ಯದರ್ಶಿಗಳು), ಪ್ರಮೋದ್ (ಖಜಾಂಚಿ) ಮತ್ತು ಜೋಸೆಫ್, ಚಂದ್ರನ್, ರಮೇಶ್, ಶೌಕತಲಿ, ಮುಸ್ತಫಾ ತಂಙಳ್, ಮುಸ್ತಫಾ ಮತ್ತು ಅಬ್ದುಲ್ಲಾ ಎಂಎ ಅವರನ್ನು ಆಯ್ಕೆ ಮಾಡಲಾಯಿತು.
ಹೆದ್ದಾರಿ ಕಾಮಗಾರಿ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದ ವ್ಯವಸ್ಥೆ ಕಲ್ಪಿಸಬೇಕು: ಕೆ.ವಿ.ವಿ.ಇ.ಎಸ್ ಕಾಸರಗೋಡು ಘಟಕ ಒತ್ತಾಯ
0
ನವೆಂಬರ್ 16, 2022