HEALTH TIPS

ರಾಜೀವ್​ ಗಾಂಧಿ ಹಂತಕರ ಬಿಡುಗಡೆ: ಆದೇಶ ಮರು ಪರಿಶೀಲಿಸಲು ಕೇಂದ್ರದಿಂದ ಸುಪ್ರೀಂಗೆ ಮೇಲ್ಮನವಿ

 

        ನವದೆಹಲಿ: ಮಾಜಿ ಪ್ರಧಾನಿ ರಾಜೀವ್​ ಗಾಂಧಿ (Rajiv Gandhi) ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿರುವ ಆದೇಶವನ್ನು ಮರು ಪರಿಶೀಲನೆ ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಗುರುವಾರ (ನ.17) ಮೇಲ್ಮನವಿ ಸಲ್ಲಿಸಿದೆ.

          ಅಪರಾಧಿಗಳಾದ ನಳಿನಿ, ಸಂತನ್, ಮುರುಗನ್, ಶ್ರೀಹರನ್, ರಾಬರ್ಟ್ ಪಯಸ್ ಮತ್ತು ರವಿಚಂದ್ರನ್​ರನ್ನು ಕಳೆದ ಶುಕ್ರವಾರ (ನ.11) ಬಿಡುಗಡೆ ಮಾಡಿ ಸುಪ್ರೀಂಕೋರ್ಟ್​ ಆದೇಶ ಹೊರಡಿಸಿತ್ತು. ಜೈಲಿನಿಂದ ಬಿಡುಗಡೆಯಾದ ಕೆಲವೇ ದಿನಗಳ ಬೆನ್ನಲ್ಲೇ ಆದೇಶವನ್ನು ಮರು ಪರಿಶೀಲನೆ ಮಾಡುವಂತೆ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.

               ಸಮರ್ಪಕವಾಗಿ ವಿಚಾರಣೆಗೆ ಒಳಪಡಿಸದೆ ಅಪರಾಧಿಗಳ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರವು ವಾದಿಸಿದೆ. ಅಪರಾಧಿಗಳ ಬಿಡುಗಡೆಯು ನ್ಯಾಯದ ಸ್ಪಷ್ಟವಾದ ಉಲ್ಲಂಘನೆಗೆ ಕಾರಣವಾಗಿದೆ ಮತ್ತು ವಾಸ್ತವವಾಗಿ, ನ್ಯಾಯದ ತಪ್ಪಿಗೆ ಕಾರಣವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೆ, ಇಂತಹ ಸೂಕ್ಷ್ಮ ವಿಷಯವು ದೇಶದ ಸಾರ್ವಜನಿಕ ಶಾಂತಿ ಸುವ್ಯವಸ್ಥೆ, ಕ್ರಿಮಿನಲ್ ಹಾಗೂ ನ್ಯಾಯ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮಗಳನ್ನು ಬೀರುವುದರಿಂದ ಭಾರತದ ಒಕ್ಕೂಟದ ಸಹಾಯವು ಅತ್ಯಂತ ಮಹತ್ವದ್ದಾಗಿದೆ ಎಂದು ಸರ್ಕಾರ ಹೇಳಿದೆ.

                     ಪ್ರಕರಣದ ಎಲ್ಲ ಏಳು ಹಂತಕರನ್ನು ಬಿಡಗಡೆ ಮಾಡಬೇಕೆಂದು ತಮಿಳುನಾಡು (Tamil Nadu) ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ರಾಜ್ಯಪಾಲರು ಸಹ ಇದಕ್ಕೆ ಒಪ್ಪಿಗೆ ನೀಡಿದ್ದರು. ಇದರ ಆಧಾರದ ಮೇಲೆ ಹಂತಕರನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್​ ಕಳೆದ ಶುಕ್ರವಾರ ಆದೇಶಿಸಿದೆ. ಹಂತಕಿ ನಳಿನಿ ಶ್ರೀಹರನ್​ ಸೇರಿದಂತೆ ಆರು ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದೀಗ ಸುಪ್ರೀಂಕೋರ್ಟ್​ ತೀರ್ಪಿನಿಂದ ನಿರಾಳರಾಗಿದ್ದಾರೆ.

                    1991, ಮೇ 21ರಂದು ತಮಿಳುನಾಡಿನ ಶ್ರೀಪೆರಂಬುದುರ್​ನಲ್ಲಿ ಮಹಿಳೆಯೊಬ್ಬಳು ನಡೆಸಿದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ರಾಜೀವ್​ ಗಾಂಧಿ ಹತರಾದರು. ಅಲ್ಲದೆ, ಇತರೆ 21 ಮಂದಿಯು ಕೂಡ ಪ್ರಾಣ ಕಳೆದುಕೊಂಡರು. ಈ ದಾಳಿಯ ಹಿಂದೆ ಎಲ್​ಟಿಟಿಇ ಸಂಘಟನೆ ಕೈವಾಡ ಇತ್ತು. ಈ ಪ್ರಕರಣದಲ್ಲಿ 7 ಮಂದಿಯನ್ನು ಬಂಧಿಸಿ, ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries