HEALTH TIPS

ವೇದಕಾಲದಿಂದಲೂ ಭಾರತ ಪ್ರಜಾತಂತ್ರದ ತೊಟ್ಟಿಲು: ಐಸಿಎಚ್‌ಆರ್‌ ವಿವರಣೆ

 

             'ಭಾರತದಲ್ಲಿ ಸಹಸ್ರಾರು ವರ್ಷಗಳ ಹಿಂದೆಯೇ 'ಲೋಕತಂತ್ರ'ದ ಮೌಲ್ಯಗಳಿಗೆ ಒತ್ತು ನೀಡಲಾಗಿತ್ತು. ಒಳ್ಳೆಯ ಆಡಳಿತ, ಜನರ ಕಲ್ಯಾಣ ಎಂಬ ಆದರ್ಶ ರೂಪತಳೆದಿದ್ದೇ ಭಾರತದಲ್ಲಿ ಎಂದರೆ ತಪ್ಪಾಗದು. ಹೀಗಾಗಿಯೇ ಭಾರತ ಹಾಗೂ ಇಲ್ಲಿದ್ದ 'ಲೋಕತಂತ್ರ' ವ್ಯವಸ್ಥೆ ಶತಮಾನಗಳ ಹಿಂದೆಯೇ ಜಗತ್ತಿನೆಲ್ಲೆಡೆ ತನ್ನ ಪ್ರಭಾವ ಬೀರಿವೆ.

                   ಇವು ಜಗತ್ತಿನ ಅನೇಕ ನಾಗರಿಕತೆಗಳ ಸಮ್ಮಿಲನಕ್ಕೂ ಕಾರಣವಾಗಿವೆ...'

                 ಇದು, ಭಾರತೀಯ ಸಂವಿಧಾನ ದಿನದ ಪ್ರಯುಕ್ತ ಭಾರತೀಯ ಇತಿಹಾಸ ಮತ್ತು ಅನುಸಂಧಾನ ಪರಿಷತ್‌ (ಐಸಿಎಚ್‌ಆರ್) ಹೊರಡಿಸಿದ ಸುತ್ತೋಲೆಯಲ್ಲಿರುವ ಒಂದು ಹೊಸ ವ್ಯಾಖ್ಯಾನ.

             'ಪ್ರಜಾತಂತ್ರ', 'ಜನತಂತ್ರ' ಹಾಗೂ 'ಲೋಕತಂತ್ರ'ದ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಪ್ರಜಾತಂತ್ರ ಎಂಬುದು ಇಂಗ್ಲಿಷ್ ಪದ 'ಡೆಮಾಕ್ರಸಿ'ಯ ಯಥಾವತ್ತಾದ ಅನುವಾದ. ಇದು ರಾಜಕೀಯ ವ್ಯವಸ್ಥೆಯೊಂದನ್ನು ಸೂಚಿಸುತ್ತದೆ. ಇನ್ನು, 'ಜನತಂತ್ರ' ಎಂಬುದು ಜನರು ಹಾಗೂ ಆಡಳಿತ ನಡೆಸುವವರನ್ನು ಒಳಗೊಂಡಿರುವ ವ್ಯವಸ್ಥೆ. ಲೋಕತಂತ್ರ ಎಂಬುದು ಸಮುದಾಯಗಳ ಕಲ್ಯಾಣದ ಉದ್ದೇಶವನ್ನು ಹೊಂದಿರುವ ಸಮುದಾಯ ಆಡಳಿತ ವ್ಯವಸ್ಥೆ ಎಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಅವಲೋಕಿಸಿದಾಗ 'ಲೋಕ' ಹಾಗೂ 'ತಂತ್ರ' ಎಂಬ ಪದಗಳು ಸಾಂಕೇತಿಕವಾಗಿ ಮಾತ್ರವಲ್ಲ, ಅವು ಒಂದಕ್ಕೊಂದು ಪೂರಕವಾಗಿಯೂ ಇವೆ ಎಂದು ಹೇಳಬಹುದು ಎಂದು ತಿಳಿಸಲಾಗಿದೆ.

               'ಡೆಮಾಕ್ರಸಿ' ಎಂಬ ವ್ಯವಸ್ಥೆಗೆ ಮೂರು ಆಯಾಮಗಳಿವೆ. ಮೊದಲನೆದಾಗಿ, ಈ ವ್ಯವಸ್ಥೆಯಲ್ಲಿ ಆಡಳಿತ ನಡೆಸುವವರು ಮಿತಿಗಳನ್ನು ಹೊಂದಿರುತ್ತಾರೆ. ಎರಡನೆದಾಗಿ ಅವರು ಉತ್ತರದಾಯಿ ಆಗಿರುತ್ತಾರೆ ಹಾಗೂ ಮೂರನೆದಾಗಿ ಆಡಳಿತದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಜನರ ಪಾಲ್ಗೊಳ್ಳುವಿಕೆ ಇರುತ್ತದೆ.

                 ಭಾರತಕ್ಕೆ ಪ್ರಜಾತಂತ್ರ ವ್ಯವಸ್ಥೆ ಹೊಸದೇನಲ್ಲ. ವೇದಗಳ ಕಾಲದಿಂದ ಹಿಡಿದು ಕಾಲಕಾಲಕ್ಕೆ ಈ ವ್ಯವಸ್ಥೆ ವಿಕಾಸ ಹೊಂದಿರುವುದನ್ನು ಕಾಣಬಹುದು. ಪುರಾತತ್ವಶಾಸ್ತ್ರ, ಸಾಹಿತ್ಯ, ನಾಣ್ಯಶಾಸ್ತ್ರ, ಶಾಸನಗಳು, ಭಕ್ತಿ ಚಳವಳಿಯನ್ನು ಅವಲೋಕಿಸಿದಾಗ ಈ ಮಾತಿಗೆ ಪುಷ್ಟಿ ಹಾಗೂ ‍ಪುರಾವೆಗಳು ಸಿಗುತ್ತವೆ ಎಂದು ಪ್ರತಿಪಾದಿಸಲಾಗಿದೆ.

             ವೇದಗಳು ಒಟ್ಟಾಗಿ ಬಾಳುವುದನ್ನು, ಸೌಹಾರ್ದದಿಂದ ಇರುವುದನ್ನು ಹೇಳುತ್ತವೆ. ಅದೇ, ಉಪನಿಷತ್ತುಗಳು ಏಕತೆ, ಎಲ್ಲ ಜೀವಿಗಳಿಗೂ ಜೀವಿಸುವ ಹಕ್ಕು ಇದೆ ಎಂದು ಸಾರುತ್ತವೆ. ಇನ್ನು, ಭಗವದ್ಗೀತೆಯು ಜ್ಞಾನ, ನಂಬಿಕೆ, ಕ್ರಿಯೆಗಳ ಬಗ್ಗೆ ಒತ್ತು ನೀಡುತ್ತದೆ.

                 ಇಂಥ ಎಲ್ಲ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಭಾರತ ತನ್ನ ಬಹುತ್ವದಿಂದಾಗಿ ಜಗತ್ತಿನ ಗಮನ ಸೆಳೆಯುತ್ತಿದೆ. ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೂ ಆಗಿದೆ. ವೇದಗಳ ಕಾಲದಿಂದಲೂ ಈ ದೇಶದ ಜನರು ಅಳವಡಿಸಿಕೊಂಡಿರುವ 'ಲೋಕತಾಂತ್ರಿಕ ಪರಂಪರೆ'ಯೇ ಇದಕ್ಕೆ ಕಾರಣ ಎಂದು ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries