HEALTH TIPS

ಕೊಸೊವೊಗೆ ಮಾನ್ಯತೆ ನೀಡುವ ಯೋಚನೆಯಿಲ್ಲ: ಭಾರತ

               ನವದೆಹಲಿ:ಹೊಸದಿಲ್ಲಿಯಲ್ಲಿ ವಾಣಿಜ್ಯ ಕಚೇರಿಯೊಂದನ್ನು ಆರಂಭಿಸುವುದಕ್ಕೆ ಕೊಸೊವೊ ಸರಕಾರ ಬೆಂಬಲ ವ್ಯಕ್ತಿಪಡಿಸಿದ ಬೆನ್ನಿಗೇ, ಭಾರತ ಸರಕಾರವು ಹೇಳಿಕೆಯೊಂದನ್ನು ನೀಡಿ, ಅದು ಕೊಸೊವೊದ ಏಕಪಕ್ಷೀಯ ಕ್ರಮವಾಗಿದೆ ಹಾಗೂ ಆ ದೇಶಕ್ಕೆ ಮಾನ್ಯತೆ ನೀಡುವ ಯೋಚನೆ ಭಾರತಕ್ಕಿಲ್ಲ ಎಂದು ಹೇಳಿದೆ.

                   ಕೊಸೊವೊದ ವಿದೇಶ ವ್ಯವಹಾರಗಳ ಸಚಿವಾಲಯದ ''ಸಹಯೋಗದೊಂದಿಗೆ'' ಭಾರತ-ಕೊಸೊವೊ ವಾಣಿಜ್ಯ ಆರ್ಥಿಕ ಕಚೇರಿಯೊಂದನ್ನು ತೆರೆಯಲಾಗಿದೆ ಎಂಬುದಾಗಿ ಈ ತಿಂಗಳ ಆದಿ ಭಾಗದಲ್ಲಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

                      ಇದಾದ 10 ದಿನಗಳ ಬಳಿಕ, ಭಾರತದ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿಕೆಯೊಂದನ್ನು ನೀಡಿ, ''ಕೊಸೊವೊ ಕುರಿತ ನಮ್ಮ ನಿಲುವು ಸ್ಪಷ್ಟವಾಗಿದೆ, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ'' ಎಂದು ಹೇಳಿದ್ದಾರೆ.

                     ಈ ವಿಷಯದಲ್ಲಿ ದ್ವಿಪಕ್ಷೀಯ ಅಂಶ ಅಥವಾ ಕೊಡುಕೊಳ್ಳುವಿಕೆ ಇಲ್ಲ ಎಂದು ಅಧಿಕೃತ ಮೂಲಗಳು ಹೇಳಿವೆ.

                    2008ರಲ್ಲಿ ಸರ್ಬಿಯದಿಂದ ಕೊಸೊವೊ ಸ್ವಾತಂತ್ರ್ಯ ಘೋಷಿಸಿದಂದಿನಿಂದಲೂ ಅದನ್ನು ಸ್ವತಂತ್ರ ದೇಶ ಎಂಬುದಾಗಿ ಮಾನ್ಯ ಮಾಡಲು ಭಾರತ ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ. ಮಾನ್ಯತೆ ನೀಡಲು ಅಗತ್ಯವಾಗಿರುವ ಮೂರು ಅಂಶಗಳನ್ನು ಕೊಸೊವೊ ಪೂರೈಸುವುದಿಲ್ಲ ಎಂದು ಅದು ಹೇಳಿದೆ. ಆ ಮೂರು ಅಂಶಗಳೆಂದರೆ, ಗಡಿ ಗೊತ್ತಾಗಿರುವ ಭೂಭಾಗ, ಜನರಿಂದ ಸ್ವೀಕೃತವಾಗಿರುವ ಹಾಗೂ ಸರಿಯಾದ ವಿಧಾನದಲ್ಲಿ ರಚನೆಯಾಗಿರುವ ಸರಕಾರ ಮತ್ತು ಆಳ್ವಿಕೆಯ ವ್ಯಾಪ್ತಿಗೆ ಬರುವ ಭೂಭಾಗದ ಮೇಲೆ ಸರಕಾರದ ಪರಿಣಾಮಕಾರಿ ನಿಯಂತ್ರಣ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries