HEALTH TIPS

ವಿದ್ಯುತ್ ದರದಲ್ಲಿ ಏರಿಕೆ ಇಲ್ಲ: ದಿನನಿತ್ಯದ ಬಳಕೆತಲ್ಲಿ ಸ್ಲಾಬ್ ಗಳು: ಸಚಿವ ಕೆ ಕೃಷ್ಣನ್ ಕುಟ್ಟಿ


             ತಿರುವನಂತಪುರಂ: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡುವುದಿಲ್ಲ ಎಂದು ವಿದ್ಯುತ್ ಸಚಿವ ಕೆ.ಕೃಷ್ಣನ್ ಕುಟ್ಟಿ ಹೇಳಿದ್ದಾರೆ.
          ಈಗಿನ ದರ ಮಾದರಿ ಬದಲಾಗಲಿದೆ. ರಾತ್ರಿ ವಿದ್ಯುತ್ ಬಳಕೆಗೆ ಪ್ರಸ್ತುತ ದರಗಳು ಮುಂದುವರಿಯುತ್ತವೆ. ಹಗಲಿನಲ್ಲಿ ವಿದ್ಯುತ್ ದರ ಇಳಿಕೆಯಾಗಲಿದೆ. ಈ ಕುರಿತ ಪ್ರಸ್ತಾವನೆಯನ್ನು ನಿಯಂತ್ರಣ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.
            ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಸಾಮಾನ್ಯ ದರಗಳು, ಸಂಜೆ 6 ರಿಂದ ರಾತ್ರಿ 10 ರವರೆಗಿನ ಪೀಕ್ ಸಮಯದಲ್ಲಿ ಹೆಚ್ಚಿನ ದರಗಳು ಮತ್ತು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಕಡಿಮೆ ದರಗಳು ಎಂಬಂತಿರಲಿದೆ. ಈ ಬಗ್ಗೆ ತಮ್ಮ ಇಲಾಖೆಗೆ ಯಾವುದೇ ಹಕ್ಕಿಲ್ಲ. ನಿಯಂತ್ರಣ ಆಯೋಗಕ್ಕೆ ಶಿಫಾರಸು ಮಾಡಲಾಗುವುದು. ಆ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
           ಕಳೆದ ವರ್ಷ ದರ ಏರಿಕೆ ಮಾಡುವಂತೆ ಆಡಳಿತ ಮಂಡಳಿ ನಿಯಂತ್ರಣ ಆಯೋಗದ ಮೊರೆ ಹೋದಾಗ ವಿರೋಧ ವ್ಯಕ್ತವಾದ ಕಾರಣ ಈ ಪ್ರಸ್ತಾವನೆ ಕೈಬಿಡಲಾಗಿತ್ತು. ಇದು ಪ್ರಸ್ತುತ ತಿಂಗಳಿಗೆ 20 ಕೆ.ಡಬ್ಲ್ಯು ಮತ್ತು 500 ಯೂನಿಟ್‍ಗಿಂತ ಹೆಚ್ಚಿನ ಬಳಕೆಯನ್ನು ಹೊಂದಿರುವ ಕೈಗಾರಿಕೆಗಳಿಗೆ ಬಿಲ್ಲಿಂಗ್ ಹೆಚ್ಚಳವಾಗಲಿದೆ. ಕೈಗಾರಿಕೆಗಳಿಗೆ ಸಂಜೆ 6 ರಿಂದ ರಾತ್ರಿ 10 ರವರೆಗೆ 50 ಶೇ. ಹೆಚ್ಚುವರಿ ಶುಲ್ಕ ಮತ್ತು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ 25 ಶೇ. ರಿಯಾಯಿತಿ ಇರುತ್ತದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries