ಮಂಜೇಶ್ವರ: ವರ್ಕಾಡಿ ಕಾವಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠೀ ಮಹೋತ್ಸವ ಸೋಮವಾರ ಆರಂಭಗೊಂಡಿತು. ಬ್ರಹ್ಮಶ್ರೀ ದಿನೇಶ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಸೋಮವಾರ ಸ್ಕಂದ ಪಂಚಮಿ ಅಂಗವಾಗಿ ಪವಮಾನ, ಪಂಚಾಮೃತ ಅಭಿಷೇಕ, ದೈವಗಳಿಗೆ ತಂಬಿಲ, ನಾಗ ತಂಬಿಲ, ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ವೈಭವ, ನಾಟಕ ಪರದರ್ಶನಗೊಂಡಿತು. 29ರಂದು ಚಂಪಾ ಷಷ್ಠಿ ಅಂಗವಾಗಿ ವಿವಿಧ ಅಭಿಷೇಕ, ಶ್ರೀ ದೇವರ ಬಲಿ ಉತ್ಸವ, ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು.
30ರಂದು ಸಪ್ತಮಿ ಅಂಗವಾಗಿ ಬೆಳಗ್ಗೆ ಶ್ರೀ ದೇವರ ಬಲಿ ಉತ್ಸವ, ಕೂಟತ್ತಜೆ ಶ್ರೀ ಅರಸುದೈವಗಳ ಭೇಟಿ, ಬಟ್ಟಲು ಕಣಿಕೆ, ನವಕ ಕಲಶಾಭಿಷೇಕ, ಮಂತ್ರಾಕ್ಷತೆ ನಡೆಯುವುದು.
ವರ್ಕಾಡಿ: ಷಷ್ಠಿ ಮಹೋತ್ಸವಕ್ಕೆ ಚಾಲನೆ
0
ನವೆಂಬರ್ 28, 2022