ಕಾಸರಗೋಡು: ಸಂಕಷ್ಟದ ನೆರವಾಗುವ ಅಗ್ನಿಶಾಮಕದಳ ಕೇವಲ ಮನುಷ್ಯರನ್ನಷ್ಟೇ ಅಲ್ಲ ಪ್ರಾಣಿಗಳ ರಕ್ಷಣೆಗೂ ಧಾವಿಸುತ್ತದೆ.
ಇಂತಹದೊಂದು ಸುದ್ದಿ ಕಾಸರಗೋಡು ಕಾಞಂಗಾಡಿನಿಂದ ವರದಿಯಾಗಿದೆ. ಕಾಞಂಗಾಡ್‍ನ ಪುಲ್ಲೂರು ವಿಷ್ಣುಮಂಗಲಂನಲ್ಲಿರುವ ಸೀತಾಲಕ್ಷ್ಮಿ ಎಂಬುವವರ ಮನೆಯ ಕಿಟಕಿಯ ತಂತಿಗಳ ಮಧ್ಯೆ ಸಿಲುಕಿದ್ದ ಬೆಕ್ಕನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.
ಅಡುಗೆ ಕೋಣೆಗೆ ಪ್ರವೇಶಿಸುವ ಮಧ್ಯೆ ಬೆಕ್ಕು ಕಿಟಕಿಯ ಸರಳುಗಳ ನಡುವೆ ಸಿಲುಕಿಕೊಂಡಿತು. ಬೆಕ್ಕು ಅಡುಗೆ ಕೋಣೆಗೆ ನುಗ್ಗಿ ಆಹಾರವನ್ನು ಸೇವಿಸಿತ್ತು. ಆದರೆ ಪಾತ್ರೆ ಬಿದ್ದ ಸದ್ದು ಕೇಳಿ ಮನೆಯವರು ಅಡುಗೆ ಕೋಣೆಗೆ ಧಾವಿಸಿದಾಗ ಗಾಬರಿಗೊಂಡ ಬೆಕ್ಕು ತಪ್ಪಿಸಿಕೊಳ್ಳಲು ಅಡುಗೆ ಮನೆಯ ಕಿಟಕಿಯ ಸರಳುಗಳಿಂದ ಜಿಗಿಯಲು ಪ್ರಯತ್ನಿಸಿತು. ಕಿರಿದಾದ ಕಿಟಕಿಯ ಕಂಬಿಗಳ ನಡುವೆ ತಲೆ ಸಿಕ್ಕಿಕೊಂಡ ನಂತರ ಬೆಕ್ಕು ಪೇಚಿಗಿಟ್ಟುಕೊಂಡಿತು.
ಯಾವುದೇ ಬದಿಗೆ ಕುತ್ತಿಗೆ ತಿರುಗಿಸಲು ಸಾಧ್ಯವಾಗದ ಬೆಕ್ಕು ತಂತಿಯನ್ನು ಕಚ್ಚಿ ಎಳೆದು ತಪ್ಪಿಸಿಕೊಳ್ಳಲು ಯತ್ನಿಸಿತು. ಬೆಕ್ಕಿನ ನೋವನ್ನು ಕಂಡ ಮನೆಯವರು ಅದನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಅವರಿಗೂ ಸಾಧ್ಯವಾಗಲಿಲ್ಲ. ಕೊನೆಗೆ ಅಗ್ನಿಶಾಮಕ ದಳದ ಸಹಾಯಕ್ಕಾಗಿ ಕರೆಸಲಾಯಿತು. ಕಾಞಂಗಾಡಿನಿಂದ ಬಂದ ಅಗ್ನಿಶಾಮಕ ದಳದವರು ಹೈಡ್ರಾಲಿಕ್ ಸ್ಪ್ರೆಡರ್ ಯಂತ್ರದ ಮೂಲಕ ತಂತಿಯನ್ನು ಕತ್ತರಿಸಿ ಬೆಕ್ಕನ್ನು ರಕ್ಷಿಸಿದ್ದಾರೆ. ಘಟನೆ ಮಂಗಳವಾರ ನಡೆದಿತ್ತು.
ತಂತಿಗಳ ನಡುವೆ ಸಿಲುಕಿಕೊಂಡ ಬೆಕ್ಕು: ರಕ್ಷಕರಾದ ಅಗ್ನಿಶಾಮಕ ಸಿಬ್ಬಂದಿ
0
ನವೆಂಬರ್ 02, 2022