ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನ್ಯೂ ಇಂಡಿಯಾ ಲಿಟರಸಿ ಪೆÇ್ರೀಗ್ರಾಮ್ ನ ಸಚೇತಕರಿಗೆ ತರಬೇತು ಕಾರ್ಯಗಾರ ಪಂಚಾಯತಿ ಸಭಾಂಗಣದಲ್ಲಿ ಜರಗಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ ಎಸ್. ಕಾರ್ಯಗಾರವನ್ನು ಉದ್ಘಾಟಿಸಿದರು. ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಕಾರ್ಯದರ್ಶಿ ಸುನಿಲ್, ಜಿಲ್ಲಾ ಪ್ರೇರಕ್ ಪರಮೇಶ್ವರ ನಾಯ್ಕ ಉಪಸ್ಥಿತರಿದ್ದರು. ಎಂ. ಶಂಕರ ರೈ ಮಾಸ್ತರ್ ಮತ್ತು ವನಜಾಕ್ಷಿ ಪಿ ಚೆಂಬ್ರಕಾನ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಪ್ರೇರಕ್ ಆನಂದ ಕುಕ್ಕಿಲ ಸ್ವಾಗತಿಸಿ, ಸಿಡಿಎಸ್ ಉಪಾಧ್ಯಕ್ಷೆ ಶಶಿಕಲಾ ವಂದಿಸಿದರು.
ಎಣ್ಮಕಜೆ ಪಂ.ನ್ಯೂ ಇಂಡಿಯಾ ಲಿಟರಸಿ ಸಚೇತಕರಿಗೆ ತರಬೇತಿ ಕಾರ್ಯಗಾರ
0
ನವೆಂಬರ್ 12, 2022
Tags