ಕಾಸರಗೋಡು : ಉತ್ತರ ಉತ್ತರ ಮಲಬಾರ್ ತೀಯ ಸಮುದಾಯ ದೇವಾಲಯ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ವಿವಿಧ ಬೇಡಿಕೆ ಮುಂದಿರಿಸಿ 2022ರ ನವೆಂಬರ್ 7ರಂದು ಕಾಸರಗೋಡು ಕಲೆಕ್ಟರೇಟ್ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಲಿದೆ. ಮಲಬಾರಿನ ವಿವಿಧ ಸಮುದಾಯಗಳ ದೇವಸ್ಥಾನದ ಅಧಿಕಾರಿಗಳು ಮತ್ತು ಕೋಲದಾರರಿಗೆ ಮಾಸಿಕ ಪಾವತಿಯನ್ನು 12 ತಿಂಗಳಿಂದ ಸ್ಥಗಿತಗೊಳಿಸಲಾಗಿದೆ ಮತ್ತು ಹಲವಾರು ಮಧ್ಯಸ್ಥಿಕೆಗಳ ಹೊರತಾಗಿಯೂ ಇನ್ನೂ ಬಾಕಿ ಪಾವತಿಸಿಲ್ಲ. ಕೇರಳ ಸರ್ಕಾರ ಮಾಸಿಕ ವೇತನವನ್ನು 1400 ರೂ.ಗೆ ಹೆಚ್ಚಿಸಿದ್ದರೂ, ಸಕಾಲಕ್ಕೆ ಈ ಮೊತ್ತ ಪಾವತಿಸದ ಕಾರಣ ಕರ್ಮಚಾರಿಗಳು ಮತ್ತು ಕೋಲದಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. 2016 ರ ನಂತರಹೊಸ ಅರ್ಜಿಗಳ ಸ್ವೀಕರಿಸದ ಹಿನ್ನೆಲೆಯಲ್ಲಿ ಹೊಸದಾಗಿ ನೇಮಕಗೊಂಡ ಆಚಾರಕರ್ಮಿಗಳು ಹಾಗೂ ಕೋಲಧಾರಿಗಳು ಸಂಕಷ್ಟ ಎದುರಿಸುವಂತಾಗಿದೆ. ಅಲ್ಲದೆ ಪ್ರಸಕ್ತ ಇರುವ 1400 ರೂಪಾಯಿಗಳನ್ನು 3000 ರೂಪಾಯಿಗೆ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಮುಂದಿರಿಸಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.
ತೀಯ ಸಮುದಾಯ ದೇವಾಲಯ ಸಂರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾದ ಧರಣಿ
0
ನವೆಂಬರ್ 05, 2022
Tags