ನವದೆಹಲಿ: ಬಸ್ಸ್ಟ್ಯಾಂಡ್, ರೈಲ್ವೇ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ಕೂಲಿ ಕಾರ್ಮಿಕರು ಶ್ರಮ ಪಟ್ಟು ಕೆಲಸ ಮಾಡುತ್ತಾರೆ. ಇದೀಗ ಕೂಲಿ ಕೆಲಸಗಾರನೊಬ್ಬ ಶ್ರಮ ವಹಿಸಿ ಕೆಲಸ ಮಾಡುತ್ತಿರುವ ವಿಡಿಯೋವೊಂದು ಟ್ವಿಟರ್ನಲ್ಲಿ ವೈರಲ್ ಆಗುತ್ತಿದೆ.
ಇದನ್ನು ನೋಡಿದ ನೆಟ್ಟಿಗರು, ಇವರೇ ನಿಜವಾದ ಬಾಹುಬಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಬಸ್ಸ್ಟ್ಯಾಂಡಿನಲ್ಲಿ ಕೂಲಿ ಕಾರ್ಮಿಕರು ಭಾರವಾದ ಮೂಟೆಗಳನ್ನು ಹೊತ್ತು ಸಾಗುವುದನ್ನು ನೋಡಿರುತ್ತೇವೆ. ಇನ್ನು ಕೆಲವರು ದೂರದ ಊರುಗಳಿಗೆ ಸಾಗುವ ಬಸ್ಸುಗಳ ಮೇಲೆ ಮೂಟೆ ಹೊತ್ತು ಹತ್ತುತ್ತಾರೆ. ಆದರೆ ಈತ ಮಾತ್ರ ತಲೆ ಮೇಲೆ ಬೈಕ್ ಹೊತ್ತು, ಬಸ್ಸಿನ ಮೇಲೆ ಹತ್ತಿದ್ದಾನೆ. ಈತನ ಸಾಹಸ ನೋಡಿದ ಜನರು ಬಾಹುಬಲಿ ಎಂದು ಕರೆಯುತ್ತಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈಗಾಗಲೇ 90 ಸಾವಿರ ಜನರು ವಿಡಿಯೋ ನೋಡಿದ್ದು, 5 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
ತಲೆ ಮೇಲೆ ಬೈಕ್ ಹೊತ್ತು, ಬಸ್ಸು ಹತ್ತಿದ ಈತನ ಸಾಹಸವನ್ನು ಮೆಚ್ಚಿಕೊಳ್ಳಲು ಕಾರಣ, ಬ್ಯಾಲೆನ್ಸಿಂಗ್. ತಲೆ ಮೇಲೆ ಯಾವುದೇ ವಸ್ತುವನ್ನು ಇಟ್ಟರೂ, ಸ್ವಲ್ಪ ಬ್ಯಾಲೆಂನ್ಸಿಂಗ್ ತಪ್ಪಿದರೂ ವಸ್ತು ನೆಲಕ್ಕುರುಳುತ್ತದೆ. ಈ ಸಂದರ್ಭದಲ್ಲಿ ಆಧಾರವಾಗಿ ಕೈಯ ಸಹಾಯ ಬೇಕಾಗುತ್ತದೆ. ಆದರೆ ಈತ ಮಾತ್ರ ಆಧಾರಕ್ಕೆ ಯಾವುದೇ ಸಹಾಯ ಬೇಡದೆ, ತಲೆ ಮೇಲೆ ಬೈಕ್ ಇಟ್ಟು ಬಸ್ಸು ಹತ್ತಿದ್ದಾನೆ. ಈತನ ಸಾಹಸ ಎಲ್ಲರ ಹುಬ್ಬೇರಿಸುವಂತಿದೆ.