ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಶಾಲಾ ಕ್ರೀಡೋತ್ಸವವನ್ನು ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ಅಬ್ದುಲ್ ರಹಮಾನ್ ಧ್ವಜಾರೋಹಣಗೈದು ಉದ್ಘಾಟಿಸಿದರು. ಮಾತೃಸಂಘದ ಅಧ್ಯಕ್ಷೆ ರೆಸೀನ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಇಸ್ಮಾಯಿಲ್ ಶುಭಹಾರೈಸಿದರು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ರಾವ್ ಚಿಗುರುಪಾದೆ ಸ್ವಾಗತಿಸಿ, ರಿಯಾಸ್ ಯಂ.ಯಸ್. ವಂದಿಸಿದರು. ಅಬ್ದುಲ್ ಬಶೀರ್ ನಿರ್ವಹಿಸಿದರು.
ಕ್ರೀಡೋತ್ಸವದ ಭಾಗವಾಗಿ ಇತರ ಸ್ಪರ್ಧೆಗಳೊಂದಿಗೆ ಮಾರಥಾನ್ ಓಟ ನಡೆಸಲಾಯಿತು. ಹೆತ್ತವರು ಊರಿನವರು ಶಿಕ್ಷಕರು ವಿದ್ಯಾರ್ಥಿಗಳು ಒಟ್ಟಾಗಿ ಓಡಿದ ಮಾರಥಾನ್ ಓಟಕ್ಕೆ ಮಂಗಲ್ಪಾಡಿ ಪಂಚಾಯತಿ ವಿದ್ಯಾಭ್ಯಾಸ ಸ್ಥಾಯಿ ಸದಸ್ಯೆ ಇರ್ಪಾನ ಇಕ್ಬಾಲ್ ಚಾಲನೆ ನೀಡಿದರು.
ಮುಳಿಂಜದಲ್ಲಿ ಶಾಲಾ ಕ್ರೀಡೋತ್ಸವ
0
ನವೆಂಬರ್ 02, 2022
Tags