ಕಾಸರಗೋಡು: ಪುತ್ತಿಗೆ ಪಂಚಾಯಿತಿ ಮುಗು ರಸ್ತೆ ನಿವಾಸಿ ಅಬೂಬಕ್ಕರ್ ಸಿದ್ದೀಕ್(31)ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೈವಳಿಕೆ ಚಿಪ್ಪಾರು ಬಾಯಾರು ಕಾಲನಿ ನಿವಾಸಿ ಜೆ. ಅಸ್ಪಾನ್ ಎಂಬಾತನನ್ನು ಪೊಲೀಸರು ಕೋಯಿಕ್ಕೋಡ್ ವಿಮಾನ ನಿಲ್ದಾಣದಿಂದ ಬಂಧಿಸಿದ್ದಾರೆ.
ಅಬೂಬಕ್ಕರ್ ಸಿದ್ದೀಕ್ ಕೊಲೆ 2022 ಜೂ. 26ರಂದು ನಡೆದಿದ್ದು, ಘಟನೆ ನಂತರ ಅಸ್ಫಾನ್ ವಿದೇಶಕ್ಕೆ ಪರಾರಿಯಾಗಿದ್ದನು. ಆರೋಪಿ ಮಂಗಳವಾರ ವಿದೇಶದಿಂದ ಆಗಮಿಸುತ್ತಿದ್ದಂತೆ ಡಿವೈಎಸ್‍ಪಿ ಸುನಿಲ್‍ಕುಮಾರ್ ನೇತೃತ್ವದ ಪೊಲೀಸರ ತಂಡ ಈತನನ್ನು ಬಂಧಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ನಿರ್ದೇಶದನ್ವಯ ಕಾರ್ಯಾಚರಣೆ ನಡೆಸಲಾಗಿದೆ. ಅಬೂಬಕ್ಕರ್ ಸಇದ್ದಿಕ್ ಕೊಲೆ ಪ್ರಕರಣದಲ್ಲಿ ಒಟ್ಟು 16ಮಂದಿ ಅರೋಪಿಗಳಿದ್ದು, ಇದುವೆರೆಗೆ ಏಳು ಮಂದಿಯನ್ನು ಬಂಧಿಸಲಾಗಿದೆ. ಬಂಧಿತ ಅಸ್ಫಾನ್ ಕೊಟೇಶನ್ ತಂಡದ ಸದಸ್ಯನಾಗಿದ್ದಾನೆ. ಅಬೂಬಕ್ಕರ್ ಸಇದ್ದಿಕ್‍ನನ್ನು ಕೊಟೇಶನ್ ತಂಡ ಅಪಹರಿಸಿ ಹಲ್ಲೆ ನಡೆಸಿ ಕೊಲೆಗೈದಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ಅಬೂಬಕ್ಕರ್ ಸಿದ್ದಿಕ್ ಕೊಲೆ: ಕೊಟೇಶನ್ ತಂಡದ ಸದಸ್ಯನ ಬಂಧನ
0
ನವೆಂಬರ್ 02, 2022