ನಮಗೆ ಬಟ್ಟೆಯಷ್ಟೇ ಚಪ್ಪಲಿಗಳೂ ಕೂಡ ಮುಖ್ಯ. ಒಂದು ಕಾಲದಲ್ಲಿ ಚಪ್ಪಲಿ ಕೇವಲ ಪಾದಗಳನ್ನು ರಕ್ಷಿಸಲು ಮಾತ್ರವಾಗಿದ್ದರೆ, ಇಂದು ಫ್ಯಾಷನ್ ಪರಿಕಲ್ಪನೆಗಳ ಆಗಮನವು ಅಲ್ಲಿಯೂ ದೊಡ್ಡ ಬದಲಾವಣೆಯನ್ನು ಮಾಡಿದೆ.
ಇಂದು ಮಾರುಕಟ್ಟೆಯಲ್ಲಿ ಸಣ್ಣ ಮತ್ತು ದೊಡ್ಡ, ಹಿಮ್ಮಡಿ, ಮುಮ್ಮಡಿ ಇಲ್ಲದ, ಹೂವು, ಕಾಲು ಮೃದುಗೊಳಿಸುವಿಕೆ ಸೇರಿದಂತೆ ಹಲವು ರೀತಿಯ ಚಪ್ಪಲಿಗಳಿವೆ. ಪಾದಗಳನ್ನು ಮೃದುವಾಗಿಡುವುದರಿಂದ ಹಿಡಿದು ಅವುಗಳ ಆಕಾರವನ್ನು ಕಾಪಾಡಿಕೊಳ್ಳುವವರೆಗೆ ಪಾದರಕ್ಷೆಗಳು ಪ್ರಮುಖ ಪಾತ್ರವಹಿಸುತ್ತವೆ.
ನಡೆಯುವ ವಯಸ್ಸಿನಿಂದ, ಪಾದರಕ್ಷೆ ನಮ್ಮ ದೈನಂದಿನ ಜೀವನದ ಭಾಗವಾಗುತ್ತವೆ. ಪಾದಗಳನ್ನು ರಕ್ಷಿಸುವ ಕಾರ್ಯಕ್ಕೆ ಸೀಮಿತವಾಗಿದ್ದ ಚಪ್ಪಲಿಗಳು ಈಗ ಫ್ಯಾಷನ್‍ನ ಭಾಗವಾಗಿವೆ. ಅದಕ್ಕಾಗಿಯೇ ನಾವು ನಮ್ಮ ಕಾಲಿಗೆ ವಿವಿಧ ರೀತಿಯ ಪಾದರಕ್ಷೆ ಧರಿಸುತ್ತೇವೆ. ಆದರೆ ಎಚ್ಚರಿಕೆಯಿಂದ ಬಳಸದಿದ್ದರೆ, ಚಪ್ಪಲಿಗಳು ಪಾದಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಪಾದರಕ್ಷೆ ಆಯ್ಕೆಮಾಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಅಂಶಗಳಿವೆ. ಇಲ್ಲದಿದ್ದರೆ, ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ಪಾದಗಳಿಗೆ ಸರಿಹೊಂದುವ ಚಪ್ಪಲಿ ಖರೀದಿಸಲು ಯಾವಾಗಲೂ ಕಾಳಜಿ ವಹಿಸಿ.
ಪಾದದ ಗಾತ್ರಕ್ಕೆ ಅನುಗುಣವಾಗಿ ಪಾದರಕ್ಷೆ ಯ್ಕೆ ಮಾಡಬೇಕು. ಪಾದಕ್ಕಿಂತ ಚಿಕ್ಕದಾದ ಅಥವಾ ದೊಡ್ಡದನ್ನು, ಬಿಗಿಯಾಗಿರುವುದನ್ನು ಆಯ್ಕೆ ಮಾಡಬೇಡಿ. ಪ್ರಮಾಣದಲ್ಲಿ ವ್ಯತ್ಯಾಸವು ನಿಮ್ಮ ಸಮತೋಲನವನ್ನು ತಪ್ಪಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
ಪಾದಗಳ ವಕ್ರರೇಖೆ ಅಥವಾ ಕಮಾನಿನ ಆಕಾರವನ್ನು ಅರ್ಥಮಾಡಿಕೊಳ್ಳುವ ಮೂಲಕ ಚಪ್ಪಲಿ ಆರಿಸಿ. ಕಡಿಮೆ ಕಮಾನಿನ ಪಾದಗಳನ್ನು ಹೊಂದಿರುವ ಜನರು ತಮ್ಮ ಪಾದಗಳಲ್ಲಿ ಸಂಧಿವಾತವನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಆದ್ದರಿಂದ ಆ ಭಾಗವನ್ನು ಬೆಂಬಲಿಸುವ ರೀತಿಯ ಪಾದರಕ್ಷೆ ಆಯ್ಕೆಮಾಡಿ.
ನಾವು ಆಗಾಗ್ಗೆ ಚಪ್ಪಲಿಗಳನ್ನು ಧರಿಸುತ್ತೇವೆ. ಚಪ್ಪಲಿಗಳನ್ನು ಸಾಮಾನ್ಯವಾಗಿ ಪಾದಗಳ ಗಾತ್ರಕ್ಕೆ ಅನುಗುಣವಾಗಿ ಖರೀದಿಸಲಾಗುತ್ತದೆ, ಆದರೆ ಕೆಲವು ತಿಂಗಳುಗಳ ನಂತರ, ಚಪ್ಪಲಿಗಳ ಗಾತ್ರವು ಬದಲಾಗುತ್ತದೆ. ಹೀಗಿರುವಾಗ ಸವೆಯುವವರೆಗೂ ಬಳಸದೇ ಹೊಸದನ್ನು ಖರೀದಿಸಬೇಕು ಎನ್ನುತ್ತಾರೆ ತಜ್ಞರು.
ಅಲ್ಲದೆ, ದಿನನಿತ್ಯ ಚಪ್ಪಲಿಗಳ ನೈರ್ಮಲ್ಯವನ್ನು ಕಾಪಾಡುವುದೂ ಅತೀಮುಖ್ಯ. ನಾವು ನಡೆದಾಡಿದಲ್ಲೆಲ್ಲ ನಮ್ಮನ್ನು ಹೊತ್ತಯ್ಯುವ ಚಪ್ಪಲಿ, ಎಲ್ಲವನ್ನೂ ಮೆಟ್ಟಿ ನಮ್ಮನ್ನು ಮುನ್ನಡೆಸುತ್ತದೆ. ಈ ವೇಳೆ ಕೋಲೆಗಳು ಸೇರಿಕೊಳ್ಳುವುದರಿಂದ, ಒಪ್ಪವಾಗಿರಿಸದಿದ್ದಲ್ಲಿ ಚರ್ಮವ್ಯಾದಿಗಳು, ಅಲರ್ಜಿಗಳು ಉಂಟಾಗುತ್ತದೆ. ದಿನನಿತ್ಯ ತೊಳೆದು, ಒಣಗಿಸಿದ ಚಪ್ಪಲಿ ಬಳಸುವುದು ಹಿತಕರ.
ಚಪ್ಪಲಿ ಆಯ್ಕೆಮಾಡುವಾಗ ಜಾಗರೂಕರಾಗಿರಿ! ಇಲ್ಲದಿದ್ದಲ್ಲಿ ಕಾಡಲಿದೆ ಸವಾಲುಗಳು
0
ನವೆಂಬರ್ 25, 2022
Tags