ಬದಿಯಡ್ಕ: ಕಾಸರಗೋಡು ಕಂದಾಯ ಜಿಲ್ಲಾಮಟ್ಟದ ಸ್ಪೋಟ್ರ್ಸ್ ಮೀಟ್ ನ ಸಬ್ ಜೂನಿಯರ್ ಬಾಯ್ಸ್ ವಿಭಾಗದಲ್ಲಿ ಪೆರಡಾಲ ನವಜೀವನ ಶಾಲೆಯ ವಿದ್ಯಾರ್ಥಿ ಮನೋಜ್ ಬಿ. 200 ಮೀಟರ್ ಹಾಗೂ 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಶಾಲಾ ಆಡಳಿತ ಮಂಡಳಿ, ಶಾಲಾ ಮುಖ್ಯೋಪಾಧ್ಯಾಯಿನಿ, ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ, ಶಾಲಾ ಶಿಕ್ಷಕರಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ. ಕಾಟು ಕುಕ್ಕೆ ಶಾಲೆಯಲ್ಲಿ ನಡೆದ ಉಪಜಿಲ್ಲಾಮಟ್ಟದಲ್ಲಿ 100 ಹಾಗೂ 200 ಮತ್ತು 400 ಮೀಟರ್ ಓಟದಲ್ಲಿ ಈತ ಪ್ರಥಮ ಸ್ಥಾನ ಪಡೆದಿದ್ದ.
ನವಜೀವನ ಶಾಲೆಯ ಮನೋಜ್ ಬಿ. ರಾಜ್ಯ ಮಟ್ಟಕ್ಕೆ ಆಯ್ಕೆ
0
ನವೆಂಬರ್ 19, 2022
Tags