ಕಾಸರಗೋಡು: ತಿರುವನಂತಪುರಂನಲ್ಲಿ ಡಿಸೆಂಬರ್ 9 ರಿಂದ 16 ರವರೆಗೆ ನಡೆಯಲಿರುವ 27ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಚಾರಕ್ಕಾಗಿ ಕಾಸರಗೋಡು ಚಲನಚಿತ್ರ ವಾಹನದ ಪ್ರಯಾಣ 15 ರಂದು ಕಾಸರಗೋಡಿನಿಂದ ಪ್ರಾರಂಭವಾಗಲಿದೆ.
ಕಾಸರಗೋಡು ಸರ್ಕಾರಿ ಕಾಲೇಜು ವಠಾರದಲ್ಲಿ ಮಧ್ಯಾಹ್ನ 2ಗಂಟೆಗೆ ನಡೆಯುವ ಸಮಾರಂಭದಲ್ಲಿ ರಾಜಮೋಹನ್ ಉದ್ಘಾಟಿಸುವರು. ಶಾಸಕ ಎನ್.ಎ ನೆಲ್ಲಿಕುನ್ನು ಅವರು ಯಾತ್ರಾ ವಾಹನಕ್ಕೆ ಹಸಿರುನಿಶಾನಿ ತೋರಿಸುವರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ಪುಸ್ತಕ ಮತ್ತು ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸುವರು. ಕಾಸರಗೋಡುನಗರಸಭೆ ಅಧ್ಯಕ್ಷ ವಕೀಲ ವಿ.ಎಂ.ಮುನೀರ್ ಅಧ್ಯಕ್ಷತೆ ವಹಿಸುವರು. ರಾಷ್ಟ್ರೀಯ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತ ಸೆನ್ನಾ ಹೆಗಡೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಜಿಲ್ಲಾ ವಾರ್ತ ಮತ್ತು ಮಾಹಿತಿ ಅಧಿಕಾರಿ ಎಂ. ಮಧುಸೂಧನನ್, ಕಾಸರಗೋಡು ಸರ್ಕಾರಿ ಕಾಲೇಜು ಪ್ರಾಂಶುಪಾಲೆ ಡಾ.ರಮಾ, ಪ್ರೆಸ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ, ಚಲನಚಿತ್ರ ಅಕಾಡೆಮಿ ಮತ್ತು ಫಿಲಂ ಸೊಸೈಟಿ ಪದಾಧಿಕಾರಿಗಳು ಹಾಗೂ ಕಾಲೇಜು ಒಕ್ಕೂಟದ ಪದಾಧಿಕಾರಿಗಳು ಪಾಲ್ಗೊಳ್ಳುವರು. ಈ ಸಂದರ್ಭ ಹಿಂದಿನ ವರ್ಷಗಳ ಸುವರ್ಣ ಚಕ್ರ ವಿಜೇತ ಚಿತ್ರಗಳ ಪ್ರದರ್ಶನ ನಡೆಯಲಿದೆ. ಬೆಳಿಗ್ಗೆ ಹತ್ತು ಗಂಟೆಗೆ ಕಾಸರಗೋಡು ಚಿನ್ಮಯ ವಿದ್ಯಾಲಯ, ಸಂಜೆ 6ಕ್ಕೆ ಮೇಪಾಟ್ ಸಹೋದರರ ನೇತೃತ್ವದಲ್ಲಿ ಆಯಂಬರ ಸರ್ಕಾರಿ ಪ.ಪೂ. ಯುಪಿ ಶಾಲೆಯ ಸಭಾಂಗಣದಲ್ಲಿ ಚಿತ್ರದ ಪ್ರದರ್ಶನ ನಡೆಯಲಿದೆ. ನ. 16 ಮತ್ತು 17ರಂದು ಕಣ್ಣೂರು ಜಿಲ್ಲೆಯಲ್ಲಿ ಪ್ರವಾಸ ನಡೆಸಲಿದ್ದು, ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಡಿಸೆಂಬರ್ 6 ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಇಂದು ಕಾಸರಗೋಡಿನಿಂದ ಚಲನಚಿತ್ರ ವಾಹನ ಪ್ರಯಾಣಕ್ಕೆ ಚಾಲನೆ
0
ನವೆಂಬರ್ 14, 2022
Tags