ಮುಂಬೈ: ಮಹಿಳೆಯರ ಕುರಿತು ಅಶ್ಲೀಲ ಮತ್ತು ಲಿಂಗ ತಾರತಮ್ಯದ ಭಾಷಣ ಮಾಡಿದ್ದಕ್ಕಾಗಿ ಯೋಗ ಗುರು ಬಾಬಾ ರಾಮ್‌ದೇವ್ ಅವರು ಕ್ಷಮೆ ಕೇಳಿದ್ದಾರೆ.
ಮಹಾರಾಷ್ಟ್ರ ಮಹಿಳಾ ಆಯೋಗ ರಾಮ್‌ದೇವ್ ಅವರಿಗೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿತ್ತು.
'ನೋಟಿಸ್‌ಗೆ ಪತ್ರಿಕ್ರಿಯಿಸಿರುವ ಬಾಬಾ ರಾಮ್‌ದೇವ್ ಅವರು ಕ್ಷಮೆ ಕೇಳಿದ್ದಾರೆ' ಎಂದು ಆಯೋಗದ ಮುಖ್ಯಸ್ಥೆ ರೂಪಾಲಿ ಚಕಣಕರ್ ಹೇಳಿದ್ದಾರೆ.
' ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ. ಚೂಡಿದಾರದಲ್ಲಿ ಇನ್ನಷ್ಟು ಚೆನ್ನಾಗಿ ಕಾಣುತ್ತಾರೆ. ನನ್ನ ಪ್ರಕಾರ, ಅವರು ಏನೂ ತೊಡದಿದ್ದರೂ ಚೆನ್ನಾಗಿ ಕಾಣುತ್ತಾರೆ...' ಎಂದು ಠಾಣೆ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ರಾಮ್‌ದೇವ್ ಅವರು ಭಾಷಣ ಮಾಡಿದ್ದರು.
ದೆಹಲಿ ಮಹಿಳಾ ಆಯೋಗ, ಮಹಿಳಾ ಪರ ಹೋರಾಟಗಾರರು, ಹಲವು ರಾಜಕಾರಣಿಗಳು ಬಾಬಾ ರಾಮ್‌ದೇವ್ ಅವರ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.