ಪತ್ತನಂತಿಟ್ಟ: ಶಬರಿಮಲೆಯಲ್ಲಿ ಭಕ್ತರ ದಂಡು ಕಂಡುಬಂದಿದೆ. ಮಂಡಲ ಉತ್ಸವದ ಮೊದಲ ನಾಲ್ಕು ದಿನಗಳಲ್ಲಿ ಎರಡೂ ಮುಕ್ಕಾಲು ಲಕ್ಷ ಯಾತ್ರಾರ್ಥಿಗಳು ಶಬರಿಮಲೆ ತಲುಪಿದ್ದಾರೆ.ಎಲ್ಲಾ ನಿರ್ಬಂಧಗಳನ್ನು ಹಿಂತೆಗೆದ ಬಳಿಕ ಸನ್ನಿಧಾನಕ್ಕೆ ಭಕ್ತರ ದಂಡು ಹರಿದುಬರುತ್ತಿದೆ.
ಹಲವಾರು ಗಂಟೆಗಳ ಕಾಲ ಸರತಿನಿಂತ ನಂತರವೇ ಶಬರೀಶ ದರ್ಶನ ಸಾಧ್ಯವಾಗುತ್ತಿದೆ.
ಆರಂಭದ ಮೊದಲ ದಿನವೇ 26,378 ಮಂದಿ ದರ್ಶನಕ್ಕೆ ಭೇಟಿನೀಡಿದ್ದರು. ಸ್ಪಾಟ್ ಬುಕ್ಕಿಂಗ್ ಮೂಲಕ ಬಂದವರ ಸಂಖ್ಯೆ ಪರಿಗಣಿಸಿದರೆ ಅದು 30,000 ಮೀರುತ್ತದೆ. 17 ಮತ್ತು 18ರಂದು 50 ಸಾವಿರಕ್ಕೂ ಹೆಚ್ಚು ಭಕ್ತರು ಅಯ್ಯಪ್ಪ ದರ್ಶನಕ್ಕೆ ತೆರಳಿದ್ದರು. ಶನಿವಾರ ಸುಮಾರು ಒಂದು ಲಕ್ಷ ಯಾತ್ರಾರ್ಥಿಗಳು ಶಬರಿಮಲೆ ಭೇಟಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.
ಇದೇ ವೇಳೆ ಭಕ್ತರ ಕಾಯುವ ವೇಳಾಪಟ್ಟಿಯನ್ನೂ ಬದಲಾಯಿಸಲಾಗಿದೆ. ದೇವಸ್ಥಾನವು ಮುಂಜಾನೆ ಮೂರು ಗಂಟೆಗೆ ತೆರೆದು ಮಧ್ಯಾಹ್ನ ಒಂದಕ್ಕೆ ಮುಚ್ಚುತ್ತದೆ.ಯಾತ್ರಿಕರ ಸಂಖ್ಯೆ ಹೆಚ್ಚುತ್ತಿದ್ದರೂ ಮೂಲಸೌಕರ್ಯಗಳನ್ನು ಸುಧಾರಿಸಲು ದೇವಸ್ವಂ ಮಂಡಳಿ ಮತ್ತು ಸರ್ಕಾರ ಕ್ರಮ ಕೈಗೊಂಡಿಲ್ಲವೆಂಬ ದೂರುಗಳಿವೆ. ಇದರಿಂದ ಯಾತ್ರಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ.
ಅಯ್ಯಪ್ಪ ದರ್ಶನಕ್ಕೆ ನಾಲ್ಕು ದಿನಗಳಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು
0
ನವೆಂಬರ್ 20, 2022
Tags