HEALTH TIPS

ಇಮಾಮ್‌ಗಳಿಗೆ ಸರಕಾರಿ ವೇತನ: ಸುಪ್ರೀಂ ಆದೇಶ ಸಾಂವಿಧಾನಿಕ ಉಲ್ಲಂಘನೆ: ಮಾಹಿತಿ ಹಕ್ಕು ಆಯುಕ್ತ

 

                  ಗಾಂಧಿನಗರ: ಮಸೀದಿಗಳಲ್ಲಿ ಇಮಾಮ್(Imam) ಗಳಿಗೆ ಸರಕಾರದಿಂದ ವೇತನ ಪಾವತಿಗೆ ಅವಕಾಶ ನೀಡುವ 1993ರ ಸುಪ್ರೀಂಕೋರ್ಟ್(Supreme Court) ಆದೇಶವು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಮಾಹಿತಿ ಹಕ್ಕು ಆಯೋಗ ತಿಳಿಸಿದೆ. ಈ ಆದೇಶವು ತಪ್ಪು ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿರುವ ಜೊತೆಗೆ,ಅನಗತ್ಯ ರಾಜಕೀಯ ಹಗ್ಗಜಗ್ಗಾಟಗಳಿಗೆ ಹಾಗೂ ಸಾಮಾಜಿಕ ಸಾಮರಸ್ಯ ಕದಡಲು ಕಾರಣವಾಗಿದೆ ಎಂದು ಅದು ಅಭಿಪ್ರಾಯಿಸಿದೆ.

                  ದಿಲ್ಲಿ ಸರಕಾರ ಹಾಗೂ ದಿಲ್ಲಿ ವಕ್ಫ್ ಮಂಡಳಿಯು ಇಮಾಮ್ಗಳಿಗೆ ನೀಡುತ್ತಿರುವ ವೇತನದ ವಿವರಗಳನ್ನು ಕೋರಿ ಆರ್ಟಿಐ ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಯ ಆಲಿಕೆ ನಡೆಸಿದ ಮಾಹಿತಿ ಆಯುಕ್ತ ಉದಯ ಮಾಹುರ್ಕರ್, ಈ ಆದೇಶವು ಸಾಂವಿಧಾನಿಕ ನಿಯಾಮವಳಿಗಳನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ. ತೆರಿಗೆ ಪಾವತಿದಾರನ ಹಣವನ್ನು ಯಾವುದೇ ನಿರ್ದಿಷ್ಟ ಧರ್ಮದ ಪರವಾಗಿ ಬಳಸಿಕೊಳ್ಳುವಂತಿಲ್ಲವೆಂದೂ ಅವರು ಹೇಳಿದ್ದಾರೆ.

                  ಅಖಿಲ ಭಾರತ ಇಮಾಮ್ ಸಂಘಟನೆಯು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್, 1993ರಲ್ಲಿ ನೀಡಿದ ತೀರ್ಪೊಂದರಲ್ಲಿ ವಕ್ಫ್‌ ಬೋರ್ಡ್‌ ನ ಆಡಳಿತಕ್ಕೊಳಪಟ್ಟಿರುವ ಎಲ್ಲಾ ಮಸೀದಿಗಳ ಇಮಾಮ್ಗಳಿಗೆ ವೇತನ ನೀಡಬೇಕೆಂದು ಆದೇಶಿಸಿತ್ತು.

               ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾರ್ವಜನಿಕ ಬೊಕ್ಕಸದಿಂದ ವಿವಿಧ ಧರ್ಮಗಳ ಪುರೋಹಿತರಿಗೆ ಮಾಸಿಕ ವೇತನ ನೀಡಿಕೆ ವಿಚಾರದಲ್ಲಿ ಸಮಾನ ಧೋರಣೆ ಅನುಸರಿಸಬೇಕೆಂದು ಪ್ರತಿಪಾದಿಸುವ ಸಂವಿಧಾನದ 25ರಿಂದ 28 ಕಲಮುಗಳ ನಿಯಮಗಳನ್ನು ಜಾರಿಗೊಳಿಸುವುದನ್ನು ಖಾತರಿಪಡಿಸಲು ತನ್ನ ಆದೇಶದ ಪ್ರತಿಯನ್ನು ಕೇಂದ್ರ ಕಾನೂನು ಸಚಿವರಿಗೆ ಕಳುಹಿಸುವಂತೆಯೂ ಮಾಹಿತಿ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

            ತೆರಿಗೆಪಾವತಿದಾರರ ಹಣವನ್ನು ಯಾವುದೇ ನಿರ್ದಿಷ್ಟ ಧರ್ಮದ ಪರವಾಗಿ ಬಳಸಕೂಡದೆಂದು ಸಂವಿಧಾನದ 27ನೇ ವಿಧಿಯು ಪ್ರತಿಪಾದಿಸುತ್ತದೆ. ಎಂಜು ಅವರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries