ತೃಶೂರ್ : ಆಲ್ಕೋಹಾಲ್ ನೀಡಿ 16 ವರ್ಷದ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಟ್ಯೂಷನ್ ಶಿಕ್ಷಕಿಯೊಬ್ಬಳನ್ನು ಕೇರಳ ಪೊಲೀಸರು ಸೋಮವಾರ (ನ.7) ಬಂಧಿಸಿದ್ದಾರೆ.
ಈ ಘಟನೆ ತ್ರಿಸ್ಸೂರ್ನಲ್ಲಿ ನಡೆದಿದೆ. ಸಂತ್ರಸ್ತ ಬಾಲಕ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದನ್ನು ನೋಡಿ ಆಪ್ತ ಸಮಾಲೋಚನೆ ನಡೆಸಿದಾಗ ತನ್ನ ಮೇಲೆ ಶಿಕ್ಷಕಿ ನಿತ್ಯವು ನಡೆಸುತ್ತಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಸದ್ಯ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದು, ಆಕೆಯು ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.
ಬಾಲಕನ ವರ್ತನೆಯಲ್ಲಾದ ಬದಲಾವಣೆಯನ್ನು ಆಕೆಯ ಶಾಲಾ ಶಿಕ್ಷಕಿ ಮೊದಲು ಗಮನಿಸಿ, ಆತನನ್ನು ವಿಚಾರಿಸಿದ್ದಾರೆ. ಆದರೆ, ಆತ ಯಾವುದನ್ನು ಬಹಿರಂಗಪಡಿಸದಿದ್ದಾಗ, ಆತನಿಗೆ ಆಪ್ತ ಸಮಾಲೋಚನೆ ಕೊಡಿಸಲಾಯಿತು. ಈ ವೇಳೆ ಆತ ಟ್ಯೂಷನ್ ಶಿಕ್ಷಕಿಯ ಕರಾಳ ಮುಖವನ್ನು ತೆರೆದಿಟ್ಟಿದ್ದಾನೆ. ನಿತ್ಯವು ಆಲ್ಕೋಹಾಲ್ ನೀಡಿ, ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾನೆ. ತಕ್ಷಣ ಶಾಲಾ ಶಿಕ್ಷಕಿ ಈ ವಿಚಾರವನ್ನು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮನ್ನುತ್ತಿ ಪೊಲೀಸ್ ಠಾಣೆಗೆ ತಿಳಿಸಿದರು.
ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಬಾಲಕನಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಪರೀಕ್ಷಾ ವರದಿಯಲ್ಲಿ ದೌರ್ಜನ್ಯ ನಡೆದಿರುವುದು ದೃಢಪಟ್ಟ ಬಳಿಕ ಟ್ಯೂಷನ್ ಶಿಕ್ಷಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಲಕನ ಹೇಳಿಕೆಯನ್ನು ಸಹ ದಾಖಲಿಸಿಕೊಂಡಿದ್ದಾರೆ. ಆರೋಪಿಯು ಸಹ ತಪ್ಪು ಒಪ್ಪಿಕೊಂಡಿದ್ದಾಳೆ.
ಪತಿಯಿಂದ ಪ್ರತ್ಯೇಕವಾಗಿರುವ ಆರೋಪಿ, ಕೋವಿಡ್ ಸಂದರ್ಭದಲ್ಲಿ ಟ್ಯೂಷನ್ ಆರಂಭಿಸಿದ್ದಳು. ಈ ವೇಳೆ ಬಾಲಕನನ್ನು ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾಳೆ. ಇದಕ್ಕೂ ಮುನ್ನ ಆಕೆಯ ಫಿಟ್ನೆಸ್ ಕೇಂದ್ರದಲ್ಲಿ ತರಬೇತುದಾರಳಾಗಿ ಕೆಲಸ ಮಾಡಿದ್ದಳು. ಇದೀಗ ಆಕೆಯ ವಿರುದ್ಧ ಪೊಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.