HEALTH TIPS

ಕೇರಳ ತುಳು ಅಕಾಡೆಮಿಯಿಂದ ತುಳು ಗ್ರಾಮೋತ್ಸವ ಮತ್ತು ರಾಷ್ಟ್ರೀಯ ಹಬ್ಬ ಆಯೋಜನೆ


         ಮಂಜೇಶ್ವರ: ಕೇರಳ ತುಳು ಅಕಾಡೆಮಿಯ ನೂತನ ಆಡಳಿತ ಸಮಿತಿಯು ಹೊಸ ಯೋಜನೆಗಳು, ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಕೇರಳ ತುಳು ಅಕಾಡೆಮಿಯನ್ನು ಜನಪ್ರಿಯಗೊಳಿಸಲು ತೀರ್ಮಾನಿಸಿದೆ.
           ತುಳು ಭಾμÉ, ಇತಿಹಾಸ, ಸಂಸ್ಕøತಿಯ ಪ್ರಚಾರಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕೋವಿಡ್ ಹರಡುವಿಕೆಯಿಂದಾಗಿ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಅಕಾಡೆಮಿಯ ಕೆಲಸವನ್ನು ಮತ್ತೆ ಸಕ್ರಿಯಗೊಳಿಸಲು ಹೊಸ ಸಮಿತಿ ನಿರ್ಧರಿಸಿದೆ. ತುಳುನಾಡು ಭಾಗವಾಗಿರುವ ಪಂಚಾಯಿತಿಗಳನ್ನು ಕೇಂದ್ರೀಕರಿಸಿ ವ್ಯಾಪಕ ತುಳು ಗ್ರಾಮೋತ್ಸವ ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷ ಕೆ.ಆರ್. ಜಯಾನಂದ ಹೇಳಿರುವರು. ಮುಂದಿನ ವರ್ಷದ ಆರಂಭದಲ್ಲಿ ಗ್ರಾಮೋತ್ಸವ ಆಯೋಜಿಸಲು ನಿರ್ಧರಿಸಲಾಗಿದೆ. ತುಳು ಕಲೆಗಳನ್ನು ವಿದೇಶದಿಂದ ಜನಪ್ರಿಯಗೊಳಿಸುವ ಗುರಿ ಹೊಂದಲಾಗಿದೆ. ಹಾಗೂ ತುಳು ಇತಿಹಾಸ ಸಾರುವ ಹಾಡುಗಳು ಕೂಡ ಪ್ರದರ್ಶನಗೊಳ್ಳಲಿವೆ. ಕರ್ನಾಟಕದ ಸಹಯೋಗದಲ್ಲಿ ತುಳು ರಾಷ್ಟ್ರೀಯ ಹಬ್ಬವನ್ನು ಏಪ್ರಿಲ್‍ನಲ್ಲಿ ಆಯೋಜಿಸಲಾಗುವುದು. ರಾಷ್ಟ್ರಮಟ್ಟದಲ್ಲಿ ತುಳು ಭಾμÉ ಮತ್ತು ಸಂಸ್ಕೃತಿಯ ಬಗ್ಗೆ ಕಾರ್ಯನಿರ್ವಹಿಸುವ ಪ್ರಮುಖರು ಪಾಲ್ಗೊಳ್ಳುವರು. ತುಳು ಭಾಷೆ ಮತ್ತು ಸಂಸ್ಕøತಿಯ ಬಗ್ಗೆ ಪ್ರಾಮಾಣಿಕ ಜ್ಞಾನ ಹೊಂದಿರುವ ತಜ್ಞರು ಭಾಗವಹಿಸುವ ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುವುದು. ತುಳುನಾಡಿನ ಪ್ರಾಚೀನ ಕಾಲದ ಅರಸು ಆಳ್ವಿಕೆ ಹಾಗೂ ರೈತ ಹೋರಾಟ, ಆಂದೋಲನಗಳನ್ನು ಒಳಗೊಂಡ ಐತಿಹಾಸಿಕ ಪುಸ್ತಕಗಳನ್ನು ಪ್ರಕಟಿಸುವುದು ಸಮಿತಿಯ ಇನ್ನೊಂದು ನಿರ್ಧಾರವಾಗಿದೆ.



        ಹೊಸಂಗÀಡಿ ದುರ್ಗಿಪಳ್ಳದಲ್ಲಿ ಕೇರಳ ತುಳು ಅಕಾಡೆಮಿ ಇರುವ ಒಂದು ಎಕರೆ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುವುದು. ತೆರೆದ ರಂಗಭೂಮಿ, ಆಡಿಟೋರಿಯಂ ಮತ್ತು ಮ್ಯೂಸಿಯಂ ಸ್ಥಾಪಿಸಲಾಗುವುದು. ಅಕಾಡೆಮಿಗೆ ಸುತ್ತುಗೋಡೆ ನಿರ್ಮಾಣ ಅಂತಿಮ ಹಂತದಲ್ಲಿದೆ. ಮಾಜಿ ಶಾಸಕ ಪಿ.ಬಿ.ಅಬ್ದುಲ್ ರಜಾಕ್ ಅವರು ತೆರೆದ ವೇದಿಕೆ ನಿರ್ಮಾಣಕ್ಕೆ 45 ಲಕ್ಷ ರೂ. ಮಂಜೂರುಗೊಳಿಸಿದ್ದರು. ಅದನ್ನು ಲಭ್ಯಗೊಳಿಸುವ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಮತ್ತು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಿಂದ ಅಕಾಡೆಮಿಗೆ 1 ಕೋಟಿ ರೂ.ಮಂಜೂರಾಗಿದೆ. ನಿರ್ಮಾಣದ ಹೊಣೆಯನ್ನು ಜಿಲ್ಲಾ ನಿರ್ಮಿತಿ ಕೇಂದ್ರ ವಹಿಸಿಕೊಂಡಿದೆ ಎಂದು ಕೆ.ಆರ್.ಜಯಾನಂದ ತಿಳಿಸಿದ್ದಾರೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries