ಕಾಸರಗೋಡು: ಸಾಮಾಜಿಕ ನ್ಯಾಯ ಇಲಾಖೆಯು ಜಿಲ್ಲಾ ಪರೀಕ್ಷಾಂಗ ಕಛೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಡಿಎಲ್‍ಎಸ್‍ಎ) ಮತ್ತು ಕಾಸರಗೋಡು ಜಿಲ್ಲಾ ಪೋಲೀಸರ ಜಂಟಿ ಮಾರ್ಗದರ್ಶನದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಪ್ರೊಬೇಶನರಿ ಜಾಗೃತಿ ವಿಚಾರ ಸಂಕಿರಣವನ್ನು ನಡೆಸಿತು.
ಜಿಲ್ಲಾ ಪೋಲೀಸ್ ಹೆಡ್ ಕ್ವಾರ್ಟರ್ಸ್ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪೋಲೀಸ್ ವರಿಷ್ಠ ಡಾ.ವೈಭವ್ ಸಕ್ಸೇನಾ ಉದ್ಘಾಟಿಸಿದರು. ಉಪ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (ಡಿಎಲ್‍ಎಸ್‍ಎ) ಕಾರ್ಯದರ್ಶಿ ಬಿ.ಕರುಣಾಕರನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೆ.ಜಿ.ಉಣ್ಣಿಕೃಷ್ಣನ್ ಪ್ರಧಾನ ಭಾಷಣ ಮಾಡಿದರು. ವಿಚಾರ ಸಂಕಿರಣದಲ್ಲಿ ಸಬ್ ಜಡ್ಜ್ ಬಿ.ಕರುಣಾಕರನ್ ಅವರು 1958ರ ಉತ್ತಮ ನಡತೆ ಕಾಯಿದೆಯ ಸುಪ್ರೀಂ ಕೋರ್ಟ್ ತೀರ್ಪುಗಳ ಆಧಾರದ ಮೇಲೆ ಮಂಡನೆ ಮಾಡಿದರು. ಜಿಲ್ಲಾ ಪರೀಕ್ಷಾಧಿಕಾರಿ ಪಿ.ಬಿಜು ಅವರು ಪರೀಕ್ಷಾ ನೀತಿ 2020, ನೇರ ಮಾರ್ಗ ಯೋಜನೆ ಮತ್ತು ಕೇರಳ ಪ್ರೊಬೇಷನ್ ಪೆÇ್ರೀಟೋಕಾಲ್ 2021 ವಿಷಯಗಳ ಆಧಾರದ ಮೇಲೆ ಪ್ರಸ್ತುತಿ ಮಾಡಿದರು. ಹೆಚ್ಚುವರಿ ಎಸ್ಪಿ ಪಿ.ಕೆ.ರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಸಿ.ಕೆ.ಶೀಬಾ ಮುಮ್ತಾಜ್ ಸ್ವಾಗತಿಸಿ, ಡಿಸಿಆರ್‍ಬಿ ಉಪ ಪೋಲೀಸ್ ವರಿಷ್ಠಾಧಿಕಾರಿ ಎ.ಅಬ್ದುಲ್ ರಹೀಮ್ ವಂದಿಸಿದರು. ಎಎಸ್.ಆರ್ ಕುಂಞÂಕೃಷ್ಣನ್, ಎಂ.ಜಯರಾಮನ್ ಮತ್ತು ಪ್ರೊಬೇಷನ್ ಸಹಾಯಕಿ ಬಿ.ಸಾವಿತ್ರಿ ವಿಚಾರ ಸಂಕಿರಣವನ್ನು ಸಂಯೋಜಿಸಿದರು.
ಪೋಲೀಸ್ ಅಧಿಕಾರಿಗಳಿಗೆ ಪ್ರೊಬೇಷನ್ ಜಾಗೃತಿ ವಿಚಾರ ಸಂಕಿರಣ
0
ನವೆಂಬರ್ 26, 2022
Tags