ಕೊಚ್ಚಿ : ಕೈರಳಿ, ಮೀಡಿಯಾ ವನ್ ಮುಂತಾದ ಚಾನೆಲ್‍ಗಳಿಗೆ ಕಡಿವಾಣ ಹಾಕುವುದಾಗಿ ಗವರ್ನರ್ ಆರಿಫ್ ಮಹಮ್ಮದ್ ಖಾನ್ ತಿಳಿಸಿದ್ದಾರೆ. ಪಕ್ಷಕ್ಕಾಗಿ ಕಾರ್ಯನಿರ್ವಹಿಸುತ್ತಿರುವವರೊಂದಿಗೆ ತಮಗೆ ಏನನ್ನೂ ಮಾತನಾಡಲು ಸಾಧ್ಯವಿಲ್ಲ ಎಂದು ಎರಡೂ ಚಾನಲ್‍ಗಳನ್ನು ಪ್ರತಿನಿಧಿಸುವ ಮೂಲಕ ಆಗಮಿಸಿದವರು ಶೀಘ್ರದಲ್ಲೇ ಹೊರಗೆ ಹೋಗಬೇಕೆಂದು ಗವರ್ನರ್ ಹೇಳಿದರು.
ಕೊಚ್ಚಿಯಲ್ಲಿ ಇಂದು ಮಾಧ್ಯಮಗಳನ್ನು ಭೇಟಿಯಾದ ವೇಳೆ ಗವರ್ನರ್ ಕೈರಳಿ ಮತ್ತು ಮೀಡಿಯಾ ವನ್ ಚಾನಲ್ ಗಳನ್ನು ಉದ್ದೇಶಿಸಿ ಮಾತನಾಡಿ ಹೊರಕಳಿಸಿದರು.
ಪಕ್ಷಕ್ಕೆ ಕೆಲಸ ಮಾಡುವವರೊಂದಿಗೆ ತಾನು ಏನೂ ಮಾತನಾಡುವುದಿಲ್ಲ. ಕೈರಳಿ, ಮೀಡಿಯಾ ವನ್ ಮುಂತಾದ ಚಾನಲ್‍ಗಳೊಂದಿಗೆ ತಾನು ತಾನು ಮಾತನಾಡುವುದಿಲ್ಲ. ಕೈರಳಿಯ ಕ್ಯಾಮರಾ ಇಲ್ಲಿ ಕಂಡರೆ ತಾನು ಮಾತನಾಡುವುದನ್ನು ನಿಲ್ಲಿಸುತ್ತೇನೆ ಎಂದು ಗವರ್ನರ್ ಹೇಳಿದ್ದಾರೆ. ಮೀಡಿಯಾ ವನ್ ವರದಿಗಾರರೊಂದಿಗೆ ಗವರ್ನರ್ ಹೊರಗೆ ಹೋಗಲು ಹೇಳಿದರು.
ಈ ಎರಡು ಚಾನೆಲ್‍ಗಳು ತನ್ನ ವಿರುದ್ಧ ಕ್ಯಾಂಪಯಿನ್ ನಡೆಸುತ್ತಿವೆ. ಪಕ್ಷಕ್ಕಾಗಿ ಅವರು ಇಂತಹವ್ಯಾಜ ಪ್ರಚಾರಗಳನ್ನು ನಡೆಸುತ್ತಾರೆ. ಆದರಿಂದ್ದ ಅವುಗಳೊಮದಿಗೆ ಮಾತನಾಡಲು ಆಸಕ್ತಿಯಿಲ್ಲ ಎಂದು ಅವರು ಹೇಳಿದರು. ಎರಡೂ ಚಾನೆಲ್ಲುಗಳನ್ನು ಪ್ರತಿನಿಧೀಕರಿಸಿದ ವರದಿಗಾರರು ಕ್ಯಾಮರಾಮಾನ್‍ಗಳು ಹೊರಬಂದ ನಂತರ ಗವರ್ನರ್ ಮಾತನಾಡಲು ಪ್ರಾರಂಭಿಸಿದರು.
ಕೈರಳಿಯೊಂದಿಗೆ ಮೀಡಿಯಾ ವಣ್ಣಿಗೂ "ಗೆಟ್ ಔಟ್" ಹೇಳಿದ ಗವರ್ನರ್: ತನ್ನ ವಿರುದ್ಧ ನಕಲಿ ಪ್ರಚಾರ ನಡೆಸುವವರೊಂದಿಗೆ ಮಾತನಾಡಲು ಆಸಕ್ತಿಯಿಲ್ಲ: ಆರಿಫ್ ಮಹಮ್ಮದ್ ಖಾನ್
0
ನವೆಂಬರ್ 07, 2022