ಬದಿಯಡ್ಕ: ಅಗಲ್ಪಾಡಿ ಶಾಲೆಯಲ್ಲಿ ಮೂರು ದಿನಗಳ ಕಾಲ ನಡೆದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಹೈಸ್ಕೂಲ್ ವಿಭಾಗದ ಸ್ಪರ್ಧೆಯಲ್ಲಿ ಪೆರಡಾಲ 164 ಅಂಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿತು. ವಿಜಯೋತ್ಸವ ಮೆರವಣಿಗೆ ಬದಿಯಡ್ಕ ನಡೆಯಿತು. ಶಾಲೆಯಿಂದಹೈಸ್ಕೂಲ್ ವಿಭಾಗದ ಪ್ರಮುಖ ಸ್ಪರ್ಧೆಯಾದ ಯಕ್ಷಗಾನ, ಒಪ್ಪನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಅಲಂಕರಿಸಿ ಮತ್ತು ಹಲವು ಇದರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿತು. ಮೆರವಣಿಗೆಯಲ್ಲಿ ನಡೆದ ವಿಜಯೋತ್ಸವ ಸಭೆಯನ್ನೂ ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಶಾಂತ ಬಿ ಉದ್ಘಾಟಿಸಿ ಮಾತನಾಡಿ ನವಜೀವನ ಶಾಲಾ ವಿದ್ಯಾರ್ಥಿಗಳು ಬದಿಯಡ್ಕದ ಕೀರ್ತಿಪತಾಕೆಯನ್ನು ಹಾರಿಸಿದರು. ಶಾಲೆಯ ಹಳೆಯ ವಿದ್ಯಾರ್ಥಿ ಎಂಬ ನೆಲೆಯಲ್ಲಿ ನನಗೆ ಅತೀವ ಸಂತೋಷವಾಗಿದೆ ಎಂದರು.
ಗ್ರಾಮ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಪಿಟಿಎ ಉಪಾಧ್ಯಕ್ಷ ಶಾಫಿ ಚೂರಿಪಳ್ಳ, ಸದಸ್ಯ ಹಮೀದ್, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಉಪಾಧ್ಯಾಯನಿ ಮಿನಿ ಟೀಚರ್ ಸ್ವಾಗತಿಸಿ, ನಿರಂಜನ್ ರೈ ಪೆರಡಾಲ ವಂದಿಸಿದರು. ಅಧ್ಯಾಪಕ ನಾರಾಯಣ ಅಸ್ರ, ಪ್ರಸಾದ್ ಮಾಸ್ತರ್, ರಾಜೇಶ್ ಮಾಸ್ತರ್, ಸೋಮನಾಥ ಮಾಸ್ತರ್, ಪ್ರಭಾವತಿ ಕೆದಿಲಾಯ, ಸಂಚಾಲಕಿ ವನಜಾ ಟೀಚರ್ ಮೊದಲಾದವರು ನೇತೃತ್ವ ನೀಡಿದರು.
ಕುಂಬಳೆ ಉಪ ಜಿಲ್ಲಾ ಶಾಲಾ ಕಲೋತ್ಸವ ಹೈಸ್ಕೂಲ್ ವಿಭಾಗ ನವಜೀವನ ಶಾಲೆಗೆ ಚಾಂಪಿಯನ್ ಪಟ್ಟ: ವಿಜಯೋತ್ಸವ ಮೆರವಣಿಗೆ
0
ನವೆಂಬರ್ 25, 2022
Tags