ಕಾಸರಗೋಡು: ಸ್ಥಾನಿಕ ಬ್ರಾಹ್ಮಣ ಸಭಾದ ವಾರ್ಷಿಕ ಮಹಾಸಭೆ ಹಾಗೂ ಜಿಲ್ಲಾ ಸಮಾವೇಶ ಕೂಡ್ಲು ಕುತ್ಯಾಳ ಗೋಪಾಲಕೃಷ್ಣ ಸಭಾ ಭವನದಲ್ಲಿ ಜರುಗಿತು. ಡಾ.ಕೆ.ಕೆ.ಶಾನುಭೋಗ್ ಅಧ್ಯಕ್ಷತೆ ವಹಿಸಿದ್ದರು. ವರದಿ, ಲೆಕ್ಕಪತ್ರ ಮಂಡನೆಯ ನಂತರ ಮುಂದಿನ ಎರಡು ವರ್ಷ ಕಾಲಾವಧಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕೆ.ಜಿ. ಶಾನುಭೋಗ್, ಕಾರ್ಯದರ್ಶಿಯಾಗಿ ಮನೋಹರ. ಎ. ಹಾಗೂ ಕೋಶಾಧಿಕಾರಿಯಾಗಿ ವಸಂತರಾಜ.ವಿ.ಪಿ ಹಾಗೂ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕೃಪಾ ಶಾನುಭೋಗ್, ಕಾರ್ಯದರ್ಶಿಯಾಗಿ ಮಾಲತಿ ಜಗದೀಶ, ಕೋಶಾಧಿಕಾರಿಯಾಗಿ ಸುಮಂಗಲಾ ಮನೋಹರ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ನಡೆದ ಜಿಲ್ಲಾ ಸಮಾವೇಶವನ್ನು ಡಾ. ಶೋಭಿತಾ ಸತೀಶ್ ಪುತ್ತೂರು ಉದ್ಘಾಟಿಸಿ, ವಾರ್ಷಿಕ ಸಂಚಿಕೆ "ಶಿವಗಂಗಾ"ವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಜ್ಯೋತಿಷ್ಯ ಬರಹಗಾರ ಸುಕುಮಾರ ಆಲಂಪಾಡಿ (ಸಮಾಜ ರತ್ನ), ರಾಮಕೃಷ್ಣಯ್ಯ ಕಂಬಾರು (ಯಕ್ಷಸಿರಿ), ಸತ್ಯನಾರಾಯಣ ನೀಲಂಗಳ (ಸಮಾಜ ಸೇವೆ), ಕೃಪಾ ಕೆ.ಜಿ. (ಸಮಾಜಕೀರ್ತಿ), ಶಿಶಿರ್ ಅಯ್ಯರ್ (ಯುವಶ್ರೀ), ಕು. ದಿವ್ಯಶ್ರೀ (ಲಲಿತಕಲೆ), ಕು.ಚೈತ್ರಾ ಶಾನುಭೋಗ್ (ಕಲಾಪ್ರತಿಭೆ) ಮತ್ತು ಕು. ಕಾವ್ಯಶ್ರೀ (ಕ್ರೀಡಾರತ್ನ)ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕೊರೋನಾ ಪಿಡುಗಿನೆದುರು ಹೋರಾಡಿದ ಡಾ.ಸತ್ಯನಾಥ್, ಡಾ. ಶಂಕರರಾಜ್ ಮತ್ತು ಡಾ.ತೇಜಸ್ವಿ ವ್ಯಾಸ್ ಇವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಸದಸ್ಯರಿಗಾಗಿ ನಡೆದ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ, ಕ್ರಿಕೆಟ್ ಪಂದ್ಯಾಟದ ವಿಜೇತ ತಂಡಗಳಿಗ ಟ್ರೋಫಿಗಳನ್ನೂ ವಿತರಿಸಲಾಯಿತು. ಸಭಾದ ಸದಸ್ಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಪೆÇ್ರ. ಎ. ಶ್ರೀನಾಥ್ ಸ್ವಾಗತಿಸಿದರು. ವಸಂತರಾಜ.ವಿ.ಪಿ. ವಂದಿಸಿದರು.
ಸ್ಥಾನಿಕ ಬ್ರಾಹ್ಮಣ ಸಭಾದ ವಾರ್ಷಿಕ ಮಹಾಸಭೆ, ಜಿಲ್ಲಾ ಸಮಾವೇಶ
0
ನವೆಂಬರ್ 10, 2022