ಕುಂಬಳೆ: ಕುಂಬಳೆಯ ಸೂರಂಬೈಲು ಸಮೀಪದ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶಡ್ರಂಪಾಡಿ ಎಡನಾಡು ದೇಗುಲದಲ್ಲಿ ಕಾರ್ತಿಕಮಾಸದ ಕಾರ್ತಿಕ ಪೂಜೆಯ ಸಲುವಾಗಿ ಇತ್ತೀಚೆಗೆ ‘ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು’ ತಂಡದಿಂದ ಹೊಸ್ತೋಟ ಮಂಜುನಾಥ ಭಾಗವತರು ರಚಿಸಿದ ಸುರಥಾಂಜನೇಯ ತಾಳಮದ್ದಳೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರು ಶಂಕರನಾರಾಯಣ ಮಯ್ಯ ಸಿರಿಬಾಗಿಲು, ರಾಮದಾಸ ಮಯ್ಯ ಕೂಡ್ಲು, ಚೆಂಡೆ ಮದ್ದಳೆಯಲ್ಲಿ ರಿತೇಶ್ ಅಡ್ಕ, ಸ್ಕಂದಮಯ್ಯ ವರ್ಕಾಡಿ ಭಾಗವಹಿಸಿದ್ದು ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಸುರಥ ರಾಜಾರಾಮ ರಾವ್ ಮೀಯಪದವು, ಶ್ರೀರಾಮ ವೇದಮೂರ್ತಿ ಗಣೇಶ ನಾವಡ ಮೀಯಪದವು, ಶತ್ರುಘ್ನ ಯೋಗೀಶ ರಾವ್ ಚಿಗುರುಪಾದೆ, ಅಂಗದ ಅವಿನಾಶ ಹೊಳ್ಳ ವರ್ಕಾಡಿ, ಹನುಮಂತ ಗುರುರಾಜ ಹೊಳ್ಳ ಬಾಯಾರು ಭಾಗವಹಿಸಿದ್ದರು.
ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣದೇವಸ್ಥಾನದಲ್ಲಿ ಪ್ರಸ್ತುತಿಗೊಂಡ ಸುರಥಾಂಜನೇಯ ತಾಳಮದ್ದಳೆ
0
ನವೆಂಬರ್ 30, 2022