HEALTH TIPS

'ವಾಚ್ ಯುವರ್ ನೈಬರ್' ಅಲ್ಲ, 'ಸೇ ಹಾಲೋ ಟು ಯುವರ್ ನೇಬರ್'; ಪೋಲೀಸರ ವಿವರಣೆ


        ತಿರುವನಂತಪುರ: 'ವಾಚ್ ಯುವರ್ ನೆಯ್ಬರ್' (ವಾಚ್ ಯುವರ್ ನೈಬರ್) ಎಂಬ ಹೆಸರಿನಲ್ಲಿ ಪ್ರಸ್ತುತ ಕೇರಳ ಪೋಲೀಸ್ (ಕೇರಳ ಪೆÇಲೀಸ್)ಯೋಜನೆಯೊಂದನ್ನು ಜಾರಿಗೊಳಿಸಿದೆ. ಕೊಚ್ಚಿ ಸಿಟಿ ಪೋಲೀಸ್ ಜಾರಿ ಮಾಡುತ್ತಿರುವುದು 'ಸೇ ಹಲೋ ಟು ಯುವರ್ ನೇಬರ್' (ನಿಮ್ಮ ನೆರೆಹೊರೆಯವರಿಗೆ ಹಲೋ ಹೇಳಿ) ಎಂಬ ಯೋಜನೆಯಾಗಿದೆ. ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸಿ ಪರಸ್ಪರ ಸೌಹಾರ್ದವನ್ನು ಖಾತರಿಪಡಿಸುವ ಮೂಲಕ ಸಾರ್ವಜನಿಕ ಸುರಕ್ಷತೆಯನ್ನು ಬಲಪಡಿಸುವ ಮೂಲಕ ಕೊಚ್ಚಿ ಸಿಟಿ ಪೋಲೀಸ್ ಸಾಮಾಜಿಕ ಮಾಧ್ಯಮ ಶಿಬಿರವನ್ನು ಸೆ ಹಲೋ ಟು ಯುವರ್ ನೇಬರ್ ಎಂದು ಪೋಲೀಸರು ವಿವರಿಸಿದರು. ಮಾಧ್ಯಮಗಳಲ್ಲಿ ಚರ್ಚೆಯಾದ ನಂತರ ಕೇರಳ ಪೆÇಲೀಸರು ವಿವರಣೆ ನೀಡಿದ್ದಾರೆ.
          ನಗರಗಳಲ್ಲಿನ ಅಪಾರ್ಟ್‍ಮೆಂಟ್ ಸಮುಚ್ಚಯಗಳಲ್ಲಿ ತಮ್ಮ ಆಚೀಚೆಗಿನ ನೆರೆಯ ನಿವಾಸಿಗಳು ಯಾರೆಂದು ತಿಳಿಯದೆ ಒಂಟಿಯಾಗಿ ಬದುಕುತ್ತಿರುವುದು ಸುರಕ್ಷಿತವಲ್ಲ ಎಂಬ ಮೌಲ್ಯಮಾಪನದಲ್ಲಿ ಪೋಲೀಸ್ ಸೆ ಹಲೋ ಟು ಯುವರ್ ನೇಬರ್ ಯೋಜನೆಗೆ ಪ್ರಾರಂಭಿಸಿತು. ಸಹೃದಯ ಸಂಬಂಧಗಳು ಮತ್ತು ಸಂಘಗಳು ವೃದ್ಧಿಗೊಳಿಸಿದ ಪರಿಕಲ್ಪನೆಗಳೊಂದಿಗೆ  ಸ್ನೇಹಪರತೆ ಸೃಷ್ಟಿಸಲು ಈ ಯೋಜನೆಯ ಮೂಲಕ ಪೆÇಲೀಸರು ಬಯಸುತ್ತಾರೆ.
         ಫ್ಲಾಟ್‍ಗಳಲ್ಲಿ ಮತ್ತು ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರ ಮತ್ತು ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನೆರೆಹೊರೆಯವರ ನಡುವೆ ಉತ್ತಮ ಸ್ನೇಹದಿಂದಿರಲು ಸಾಧ್ಯವಾಗುತ್ತದೆ. ಕುಟುಂಬಗಳ ನಡುವಿನ ಪರಸ್ಪರ ಸಂಬಂಧವು ಮಕ್ಕಳೊಂದಿಗೆ ಒಟ್ಟಿಗೆ ಸೇರಿಕೊಳ್ಳುತ್ತದೆ. ನೆರೆಹೊರೆಯವರು  ಹತ್ತಿರದಿಂದ ಪರಸ್ಪರ ಕೈಸಹಾಯಿಗಳಾದಾಗ ಸುರಕ್ಷಿತತೆ ವೃದ್ಧಿಸುತ್ತದೆ.
                 ಅಪಾರ್ಟ್‍ಮೆಂಟ್ ಸಮುಚ್ಚಯಗಳಲ್ಲಿನ ಮಕ್ಕಳ ಉದ್ಯಾನವನಗಳ ಭೇಟಿ, ಉದ್ಯೋಗ ಸ್ಥಳಕ್ಕೆ ಭೇಟಿ ನೀಡುವ ಪ್ರಯಾಣ ಮತ್ತು ಗೃಹಸಂದರ್ಶನಗಳ ಮೂಲಕ ಸ್ನೇಹವನ್ನು ಉತ್ತೇಜಿಸಲು ಪೆÇೀಲೀಸರ ಯೋಜನೆಯ ಉದ್ದೇಶವಾಗಿದೆ. ಕಳೆದ ಕೆಲವು ತಿಂಗಳು ಕೊಚ್ಚಿ ನಗರದಲ್ಲಿ ಈ ಯೋಜನೆ ಜಾರಿಯಾಗಿದೆ ಎಂದು ಕೇರಳ ಪೆÇಲೀಸರು ತಿಳಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries