ಬದಿಯಡ್ಕ: ಕಾಸರಗೋಡು ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್ ನೇತೃತ್ವದಲ್ಲಿ ಫಿಫಾ ವಿಶ್ವಕಪ್ ಫುಟ್ಬಾಲ್ ಆಟದ ಸಂದರ್ಭದಲ್ಲಿ ಮಾದಕ ದ್ರವ್ಯದ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರದ ಮಿಲಿಯನ್ ಗೋಲ್ ಕಾರ್ಯಕ್ರಮದ ಸಮಾರೋಪವು ಬದಿಯಡ್ಕ ನವಜೀವನ ವಿದ್ಯಾಲಯದಲ್ಲಿ ಸೋಮವಾರ ಜರಗಿತು.
ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ.ನೆಲ್ಲಿಕುನ್ನು, ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಿ., ಉಪಾಧ್ಯಕ್ಷ ಎಂ.ಅಬ್ಬಾಸ್, ನವಜೀವನ ಹಿರಿಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಮಿನಿ ಪಿ., ಪ್ರಾಂಶುಪಾಲ ಮಾಧವನ್ ಭಟ್ಟಾತ್ತಿರಿ, ಶಾಲಾ ಆಡಳಿತ ಸಮಿತಿಯ ಜತೆಕಾರ್ಯದರ್ಶಿ ರಮೇಶ ಕೆ., ಶಾಲಾ ಆಡಳಿತಾಧಿಕಾರಿ ವೆಂಕಟರಾಜ ಕಬೆಕ್ಕೋಡು, ಮುಖ್ಯ ಶಿಕ್ಷಕಿ ದಿವ್ಯಶ್ರೀ ಎನ್.ಎ., ನವಜೀವನ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ ಒಟ್ಟು 1546 ಮಂದಿ ಗೋಲ್ ಬಾರಿಸಿದ್ದರು. ಕೆಲವು ದಿನಗಳ ಹಿಂದೆ ಕಾಸರಗೋಡು ಬ್ಲಾಕ್ ಮಟ್ಟದ ಮಿಲಿಯನ್ ಗೋಲ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಉದ್ಘಾಟಿಸಿದ್ದರು.
ಮಿಲಿಯನ್ ಗೋಲ್ ಕಾರ್ಯಕ್ರಮದ ಸಮಾರೋಪ
0
ನವೆಂಬರ್ 25, 2022
Tags