ಕುಂಬಳೆ : ಇತಿಹಾಸ ಪ್ರಸಿದ್ಧ ಹದಿನೆಂಟು ಪೇಟೆಯ ಒಡೆಯನಾದ ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವರಿಗೆ ಭಕ್ತಾದಿಗಳು ಸಮರ್ಪಿಸುವ 14 ಕೆಜಿ ಸ್ವರ್ಣ (ಸರಿಸುಮಾರು 8 ಕೋಟಿ ರೂಪಾಯಿ) ವೆಚ್ಚದ ಸ್ವರ್ಣ ಪಲ್ಲಕ್ಕಿಯು ನಿನ್ನೆ ಕುಂಬಳೆಗೆ ಆಗಮಿಸಿದಾಗ ಕುಂಬಳೆ ಶ್ರೀ ವೀರ ವಿಠ್ಠಲ ದೇವಸ್ಥಾನದ ವತಿಯಿಂದ ಸ್ವರ್ಣ ಪಲ್ಲಕ್ಕಿಗೆ ವೇದಮೂರ್ತಿ ಕೆ. ಪುಂಡಲೀಕ್ ಭಟರವರು ಹೂಮಾಲೆ ಹಾಗೂ ಅರತಿ ಮಾಡುವುದರೊಂದಿಗೆ ಭವ್ಯ ಸ್ವಾಗತ ನೀಡಲಾಯಿತು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿ ಮೊಕ್ತೆಸರರಾದ ಕೆ ಚಂದ್ರಶೇಖರ ಭಟ್, ಎಸ್ ಸದಾನಂದ ಕಾಮತ್, ಕೆ. ರಘುವೀರ್ ನಾಯಕ್, ಕೆ. ಮಧುಸೂದನ್ ಕಾಮತ್,ಜಿ ಎಸ್ ಬಿ ಮಹಿಳಾ ಮಂಡಳಿ ಅಧ್ಯಕ್ಷೆ ಬಿ ಸುಚಿತ್ರ ಪೈ, ಜಿ ಎಸ್ ಬಿ ಯುವಕ ಸಂಘದ ಅಧ್ಯಕ್ಷರಾದ ಕೆ. ಪ್ರಸಾದ್ ಜೋಶಿ, ಪ್ರಧಾನ ಕಾರ್ಯದರ್ಶಿ ಕೆ. ಸುಧಾಕರ ಕಾಮತ್ ಹಿರಿಯರಾದ ಬಿ ರಘುನಾಥ ಪೈ ಹಾಗೂ ಹೆಚ್ಚಿನ ಸಂಖ್ಯೆಯ ಸಮಾಜ ಭಾಂದವರು ಉಪಸ್ಥಿತರಿದ್ದರು.
ಸ್ವರ್ಣ ಪಲ್ಲಕಿಗೆ ಕುಂಬಳೆಯಲ್ಲಿ ಸ್ವಾಗತ
0
ನವೆಂಬರ್ 04, 2022