ಬದಿಯಡ್ಕ: ದಂತ ವೈದ್ಯ ಕೃಷ್ಣಮೂರ್ತಿ ಸರ್ಪಂಗಳ ನಿಗೂಢ ಸಾವಿಗೆ ಸಂಬಂಧಿಸಿದ ತನಿಖೆಗಾಗಿ ಬದಿಯಡ್ಕ ಠಾಣೆ ಪೊಲೀಸರು ಕುಂದಾಪುರಕ್ಕೆ ತೆರಳಿದ್ದಾರೆ. ಕುಂದಾಪುರ ಠಾಣೆ ಪೊಲಿಸರು ಸಂಗ್ರಹಿಸಿರುವ ಸಿಸಿ ಕ್ಯಾಮರಾ ದೃಶ್ಯಾವಳಿ ಬಗ್ಗೆ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಪೊಲೀಸರು ತೆರಳಿದ್ದಾರೆ.
ಮ. 8ರಂದು ಡಾ. ಕೃಷ್ಣಮೂರ್ತಿ ಅವರು ನಿಗೂಢವಾಗಿ ನಾಪತ್ತೆಯಾಗಿದ್ದು, ಮರುದಿನ ಕುಂದಾಪುರ ಸನಿಹ ರೈಲ್ವೆ ಹಳಿಯಲ್ಲಿ ಇವರ ಮೃತದೇಹ ಪತ್ತೆಯಾಗಿತ್ತು. ಕುಂಬಳೆಯಲ್ಲಿ ಇವರ ಬೈಕ್ ಪತ್ತೆಯಾಗಿದ್ದರೂ, ಅಲ್ಲಿಂದ ಇವರು ಕುಂದಾಪುರಕ್ಕೆ ಹಾಗೂ ಮೃತದೇಹ ಪತ್ತೆಯಾಗಿರುವ ಸ್ಥಳಕ್ಕೆ ತಲುಪಿರುವ ಬಗ್ಗೆ ಊಹಾಪೋಹ ಉಂಟಾಗಿತ್ತು.ಹೀಗಾಗಲೇ ಕುಂದಾಪುರ ಠಾಣೆ ಪೊಲೀಸರು ಬದಿಯಡ್ಕಕ್ಕೆ ಆಗಮಿಸಿ ಕೆಲವೊಂದು ಮಾಹಿತಿ ಕಲೆಹಾಕಿದ್ದರು.
ದಂತ ವೈದ್ಯರ ನಿಗೂಢ ಸಾವು: ಕುಂದಾಪುರ ತೆರಳಿದ ಬದಿಯಡ್ಕ ಪೊಲೀಸರು
0
ನವೆಂಬರ್ 23, 2022
Tags