ಪತ್ತನಂತಿಟ್ಟ: ಇಳಂತೂರು ಕೊಲೆ ಪ್ರಕರಣದ ಡಿಎನ್‍ಎ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಬಲಿಯಾದ ಮೃತದೇಹವೊಂದು ಪದ್ಮಾ ಅವರದ್ದೆಂದು ದೃಢಪಟ್ಟಿದೆ.
56 ತುಂಡುಗಳಾಗಿದ್ದ ಮೃತದೇಹಗಳ ಪೈಕಿ ಒಂದರ ಫಲಿತಾಂಶ ಹೊರಬಿದ್ದಿದೆ. ಅವಶೇಷಗಳಿಂದ ಡಿಎನ್ಎ ಪಡೆಯಲಾಗಿದೆ. ಸಂಪೂರ್ಣ ಡಿಎನ್‍ಎ ಫಲಿತಾಂಶ ಬಂದ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪದ್ಮಾ ಅವರ ಪಾರ್ಥಿವ ಶರೀರ ಬಿಡುಗಡೆ ವಿಳಂಬದ ವಿರುದ್ಧ ನಿನ್ನೆ ಕುಟುಂಬಸ್ಥರು ಪ್ರತಿಭಟನೆಗೆ ಮುಂದಾಗಿದ್ದರು. ಪದ್ಮಾ ಅವರ ಪುತ್ರ ಸೆಲ್ವರಾಜ್ ಅವರು ಪಿಣರಾಯಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರದಿಂದ ಯಾವುದೇ ನೆರವು ಸಿಗುತ್ತಿಲ್ಲ ಎಂದಿದ್ದರು. ಸೆಲ್ವರಾಜ್ ಅವರು ತಮಿಳುನಾಡಿನಿಂದ ಕೇರಳಕ್ಕೆ ಬಂದು ಸಂಕಷ್ಟದಲ್ಲಿದ್ದಾರೆ. ತಾಯಿ ತೀರಿಕೊಂಡ ನಂತರ ಕೇರಳ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ. ಅಮ್ಮನ ಹಂತಕರು ಮತ್ತೆ ಹೊರಗೆ ಬಂದರೆ ಅಂತಹ ಅಪರಾಧಗಳನ್ನು ಮಾಡುವುದು ಖಚಿತ ಎಂದು ಸೆಲ್ವರಾಜ್ ಹೇಳಿದ್ದಾರೆ.
ಜನ್ಮ ನೀಡಿದ ತಾಯಿಯ ಅಂತಿಮ ಸಂಸ್ಕಾರ ಮಾಡಲು ಸಹ ಸಾಧ್ಯವಾಗುತ್ತಿಲ್ಲ. ಇಲ್ಲಿ ತಂಗಲು ಈಗಾಗಲೇ ಅರವತ್ತು ಸಾವಿರ ರೂಪಾಯಿಗೂ ಹೆಚ್ಚು ಖರ್ಚಾಗಿದೆ. ಪ್ರಕರಣದ ಹಿಂದೆ ಹೋಗಿ ಕೆಲಸವನ್ನೂ ಕಳೆದುಕೊಂಡಿದ್ದಾರೆ. ಮೊಕದ್ದಮೆ ಹೂಡಲು ವಕೀಲರಿಗೆ ದೊಡ್ಡ ಮೊತ್ತದ ಹಣ ಕೊಡುವಷ್ಟು ಆರ್ಥಿಕ ಸಾಮಥ್ರ್ಯ ತನ್ನಲ್ಲಿಲ್ಲ ಎಂದಿದ್ದರು.
ಮೃತ ದೇಹ ಪದ್ಮ ಅವರದ್ದೆಂದು ಖಚಿತ: ಡಿ.ಎನ್.ಎ. ಪರೀಕ್ಷಾ ಫಲಿತಾಂಶದಿಂದ ಪತ್ತೆ
0
ನವೆಂಬರ್ 01, 2022