ಕೋಝಿಕ್ಕೋಡ್: ಮಾವೂರು ಠಾಣೆಯ ಪೋಲೀಸರು ನಿರ್ದೇಶಿಸಿರುವ ಲೈಫ್ ಲೈನ್ ಕಿರುಚಿತ್ರ ಗಮನ ಸೆಳೆಯುತ್ತಿದೆ.
ಐದು ನಿಮಿಷಗಳ ಅವಧಿಯ ಈ ಕಿರು ಸಿನಿಮಾದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಬಳಕೆ ಮತ್ತು ಅದರಿಂದ ಕುಟುಂಬಗಳಲ್ಲಿ ಉಂಟಾಗುವ ತೊಂದರೆಗಳನ್ನು ಚಿತ್ರಿಸಲಾಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮಾದಕ ವ್ಯಸನದ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರು ಪೋಲೀಸರೊಂದಿಗೆ ಕೈಜೋಡಿಸುವ ಅಗತ್ಯವನ್ನು ಚಲನಚಿತ್ರವು ಮುಖ್ಯವಾಗಿ ಬಿಂಬಿಸುತ್ತದೆ. ಅಲ್ಲದೆ, ಯುವ ಪೀಳಿಗೆಯನ್ನು ಸಂಕಷ್ಟಕ್ಕೊಡ್ಡಿರುವ ಡ್ರಗ್ಸ್ ವಿರುದ್ಧ ಎಚ್ಚರಿಕೆಯ ಸಂದೇಶದೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ.
ಈ ಚಿತ್ರವನ್ನು ಮಾವೂರು ಪೋಲೀಸ್ ಠಾಣೆಯ ಸಿಪಿಒ ಲಿಜು ಲಾಲ್ ನಿರ್ದೇಶಿಸಿದ್ದಾರೆ. ಶಿಜು ಪಾಪನ್ನೂರ್ ಸೃಜನಾತ್ಮಕ ನಿರ್ದೇಶಕರಾಗಿರುವ ಈ ಚಿತ್ರಕ್ಕೆ ಬೆಂಜಿತ್ ಪಿ ಗೋಪಾಲ್ ಅವರ ಛಾಯಾಗ್ರಹಣವಿದೆ. ಮಾವೂರು ಎಸ್‍ಐ ಮಹೇಶ್‍ಕುಮಾರ್, ಹರೀಂದ್ರನಾಥ್, ಟಿಕೆ ರಮ್ಯಾ, ವಿಷ್ಣು ರಾಜನ್, ವೈಗಾ ಗೋಪಾಲ್ ಮತ್ತು ಅನಿಹಾ ಬಿಜಿತ್ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.ನಿಪುನ್ ಕರಿಪಾಲ್ ಸಂಕಲನ ಮತ್ತು ಮಾವೂರ್ ಎಸ್.ಐ ವೇಣುಗೋಪಾಲ್ ನಿರ್ಮಾಣ ವಿನ್ಯಾಸ, ಅಖಿಲ್ ತಿರುವೋಡೆ ಸಹಾಯಕ ನಿರ್ದೇಶಕ, ದನುμï ಹರಿಕುಮಾರ್ ಹಿನ್ನೆಲೆ ಸಂಗೀತ. ಅರ್ಜುನ್ ಮತ್ತು ಸನೀಶ್ ರಾಜ್ ಸಹಾಯಕ ಕ್ಯಾಮೆರಾ ನಿರ್ವಹಿಸಿದ್ದಾರೆ.
ಲೈಫ್ ಲೈನ್'; ಮಾವೂರು ಪೋಲೀಸರಿಂದ ಕಿರುಚಿತ್ರ: ಸಾಮಾಜಿಕ ಜಾಲತಾಣದಲ್ಲಿ ವೈರಲ್
0
ನವೆಂಬರ್ 18, 2022