ಕುಂಬಳೆ: ಕೇರಳ ರಾಜ್ಯದ 61ನೇ ಶಾಲಾ ಕಲೋತ್ಸವದ ಅಂಗವಾಗಿ ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ನಡೆದ ಕಲೋತ್ಸವದ ಪ್ರೌಢಶಾಲಾ ವಿಭಾಗದ ನಾಟಕ ಸ್ಪರ್ಧೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ತಂಡ ತೊಗಲು ಗೊಂಬೆ ಎಂಬ ನಾಟಕ ಪ್ರದರ್ಶಿಸಿ ಎ ಶ್ರೇಣಿಯೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದು ಮೆಚ್ಚುಗೆಗೆ ಪಾತ್ರವಾಯಿತು.
ಸದಾಶಿವ ಪೆÇಯ್ಯೆ ರಚಿಸಿ ನಿರ್ದೇಶಿಸಿದ ನಾಟಕದಲ್ಲಿ ಹೊಸ ತಲೆಮಾರಿನ ವಿದ್ಯಾರ್ಥಿ ಸಮೂಹ ಇತರರ ಕೈಗೊಂಬೆಯಾಗಿ ತಮ್ಮ ಜೀವನವನ್ನು ಚಟಗಳಿಗೆ ಬಲಿಮಾಡಿಕೊಳ್ಳುವ ತಲ್ಲಣದ ಕಥಾ ಹಂದರವಿದೆ.
ತಾಯಿಯ ಪಾತ್ರವನ್ನು ನಿರ್ವಹಿಸಿದ ಮನಿಷಾ ಶೆಟ್ಟಿ ಉತ್ತಮನಟಿ ಪ್ರಶಸ್ತಿಗೆ ಭಾಜನಳಾದಳು. ವಿದ್ಯಾರ್ಥಿಗಳ ಯಶಸ್ಸಿಗೆ ಶಾಲಾ ವ್ಯವಸ್ಥಾಪಕರು, ಮುಖ್ಯೋಪಾಧ್ಯಾಯರು, ರಕ್ಷಕ-ಶಿಕ್ಷಕ ಸಂಘ, ಅಧ್ಯಾಪಕ ಹಾಗೂ ಸಿಬ್ಬಂದಿ ವರ್ಗ ಪ್ರಶಂಸಿಸಿದರು.
‘ತೊಗಲು ಗೊಂಬೆ’ ನಾಟಕ ದ್ವಿತೀಯ
0
ನವೆಂಬರ್ 30, 2022
Tags