ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಅಡ್ಕಸ್ಥಳ ಪೇಟೆಯಲ್ಲಿ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಸಂಸದ ನಿಧಿಯನ್ನು ಉಪಯೋಗಿಸಿ ಸ್ಥಾಪಿಸಲಾದ ಹೈಮಾಸ್ಟ್ ಲೈಟಿನ ಲೋಕಾರ್ಪಣಾ ಕಾರ್ಯಕ್ರಮ ಜರಗಿತು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಂ.ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಜಿಲ್ಲಾ ಪಂ.ಸದಸ್ಯ ನಾರಾಯಣ ನಾಯ್ಕ್, ಪಂ.ಸದಸ್ಯರಾದ ಮಹೇಶ್ ಭಟ್, ಸಾಮಾಜಿಕ ಮುಂದಾಳು ಆಮು ಅಡ್ಕಸ್ಥಳ, ಕೆ.ಎಸ್.ಬಿ.ಯ ಸಹಾಯಕ ಅಭಿಯಂತರ ರಾಜಗೋಪಾಲ್ ಮೊದಲಾದವರು ಭಾಗವಹಿಸಿದ್ದರು.
ಅಡ್ಕಸ್ಥಳದಲ್ಲಿ ಸಂಸದ ನಿಧಿಯ ಹೈಮಾಸ್ಟ್ ಲೈಟ್ ಲೋಕಾರ್ಪಣೆ
0
ನವೆಂಬರ್ 25, 2022
Tags