ಕಾಸರಗೋಡು: ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‍ಐ) ಮತ್ತು ಕೇರಳ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಎನ್ವಿರಾನ್‍ಮೆಂಟ್ ಜಂಟಿಯಾಗಿ ಆಯೋಜಿಸಿದ್ದ ಗ್ರಾಮೀಣ ಸಂಶೋಧನಾ ಸಮ್ಮೇಳನ ಸಂಪನ್ನಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಗ್ರಾಮೀಣ ಸಂಶೋಧಕರಿಗಿರುವ ರೂರಲ್ ಇನ್ನೋವೇಶನ್ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. ಎರಡು ಅತ್ಯುತ್ತಮ ಆವಿಷ್ಕಾರಗಳಿಗಾಗಿ ಶಾಜಿ ವರ್ಗೀಸ್ ಮತ್ತು ಜೋಸೆಫ್ ಪೀಚನಾಟ್ ಅವರಿಗೆ ರೂರಲ್ ಇನ್ನೋವೇಶನ್ ಪ್ರಶಸ್ತಿಯನ್ನು ನಬಾರ್ಡ್ ವತಿಯಿಂದ ನೀಡಲಾಯಿತು. ಸಾವಯವ ಬೀಜದ ತಟ್ಟೆ ಮತ್ತು ನಿರ್ಮಾಣ ತಂತ್ರಕ್ಕಾಗಿ ಶಾಜಿ ವರ್ಗೀಸ್ ಅವರಿಗೆ ಪ್ರಶಸ್ತಿ ನೀಡಲಾಯಿತು. ಜೋಸೆಫ್ ಪೀಚ್ಚನಾಟಿ ಅವರಿಗೆ ಪೇಪರ್ ಬ್ಯಾಗ್ ಈಸಿ ಮೇಕಿಂಗ್ ಆವಿಷ್ಕಾರಕ್ಕಾಗಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂಪಾಯಿ, ಪ್ರಮಾಣಪತ್ರ ಮತ್ತು ಫಲಕವನ್ನು ಒಳಗೊಂಡಿದೆ.
ನಾಲ್ಕು ಅತ್ಯುತ್ತಮ ಆವಿಷ್ಕಾರಗಳಿಗೆ ವಿಶೇಷ ಪ್ರಶಸ್ತಿಗಳನ್ನು ಸಹ ನೀಡಲಾಯಿತು. ಪಿ.ಪಿ.ಶೈಜು ಮತ್ತು ರಮ್ಯಾ ಶೈಜು ಸಿದ್ಧಪಡಿಸಿದ ಶಾವಿಗೆ, ತೆಂಗಿನೆಣ್ಣೆ ಮತ್ತು ಕೊಬ್ಬರಿ ಉಜ್ಜುವ ಯಂತ್ರ, ಜೋಶಿ ಜೋಸೆಫ್ ಅವರ ರೀ ನೋವ್ ಕ್ರಶಿಂಗ್ ಮೆಷಿನ್, ಕೆ.ಜಾಯ್ ಆಗಸ್ಟ್ ಅವರ ಕೇರಾ ಪೀಲರ್, ಕೆ.ಬಿ.ಅನೂಪ್, ಮಂಜು ಸುರೇಶ್, ಶ್ರೀಜಿತ್ ಎಸ್.ನಾಯರ್ ಮತ್ತು ಎಸ್.ಗೋಕುಲ್ ಕೃಷ್ಣನ್ ಅವರ ಅಸೀಗುರರ್ ವಿದಾ ಎಂಬೀ ಆವಿಷ್ಕಾರಗಳಿಗೆ ಪ್ರಶಸ್ತಿ ನೀಡಲಾಯಿತು. ವಿಶೇಷ ಪ್ರಶಸ್ತಿಯು ಐದು ಸಾವಿರ ರೂಪಾಯಿ, ಪ್ರಶಸ್ತಿ ಪತ್ರ ಮತ್ತು ಫಲಕವನ್ನು ಒಳಗೊಂಡಿದೆ.
ಸಮಾರೋಪ ಸಮಾರಂಭವನ್ನು ನಬಾರ್ಡ್ ಕೇರಳ ಪ್ರದೇಶ ಮುಖ್ಯ ಪ್ರಧಾನ ವ್ಯವಸ್ಥಾಪಕರು ಡಾ.ಗೋಪಕುಮಾರನ್ ನಾಯರ್ ಉದ್ಘಾಟಿಸಿದರು. ಕೇರಳ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಮಂಡಳಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ಕೆ.ಪಿ. ಸುಧೀರ್ ಅಧ್ಯಕ್ಷತೆ ವಹಿಸಿದ್ದರು.
ಚರ್ಚಾ ಸಮಿತಿ ಅಧ್ಯಕ್ಷ ಪೆÇ್ರ.ಜಿಪ್ಪು ಜೇೀಕಬ್, ಐಸಿಎಆರ್-ಸಿಪಿಸಿಆರ್ ಐ ನಿರ್ದೇಶಕಿ ಡಾ.ಅನಿತಾ ಕರುಣ್ ಉಪಸ್ಥಿತರಿದ್ದರು. ಕೇರಳದ ವಿವಿಧ ಭಾಗಗಳ ಗ್ರಾಮೀಣ ಪರಿಶೋಧಕರ 34 ತಾಂತ್ರಿಕ ಆವಿಷ್ಕಾರಗಳನ್ನು ಪ್ರದರ್ಶಿಸಲಾಯಿತು.
ಸಿಪಿಸಿಆರ್ ನಲ್ಲಿ ಗ್ರಾಮೀಣ ಸಂಶೋಧಕ ಸಂಗಮ ಸಮಾರೋಪ
0
ನವೆಂಬರ್ 28, 2022