ತಿರುವನಂತಪುರಂ: ವಿಶ್ವದಾದ್ಯಂತ ಸಿನಿಪ್ರೇಮಿಗಳು ಎದುರು ನೋಡುತ್ತಿರುವ ಜೇಮ್ಸ್ ಕ್ಯಾಮರೂನ್ ಅಭಿನಯದ ಅವತಾರ್ ಚಿತ್ರದ ಎರಡನೇ ಭಾಗಕ್ಕೆ ಕೇರಳದಲ್ಲಿ ನಿಷೇಧ ಹೇರಲಾಗಿದೆ.
ಇದನ್ನು ರಾಜ್ಯದಲ್ಲಿ ಪ್ರದರ್ಶಿಸಲು ಸಾಧ್ಯವಿಲ್ಲ ಎಂದು ಫಿಯೋಕ್ ಸ್ಪಷ್ಟಪಡಿಸಿದೆÉ.
ಮೂರು ವಾರಗಳ ಪ್ರದರ್ಶನ ಸ್ವೀಕಾರಾರ್ಹವಲ್ಲ ಮತ್ತು ಅವತಾರ್ 2 ವಿದೇಶಿ ಭಾಷೆಯ ಚಲನಚಿತ್ರಗಳಿಗೆ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಫಿಯೋಕ್ ಅಧಿಕಾರಿಗಳು ತಿಳಿಸಿದ್ದಾರೆ. ವಿತರಕರು ಬೇಡಿಕೆ ಇಟ್ಟಿರುವ ಮೊತ್ತ ಹೆಚ್ಚಿದೆ ಎನ್ನುತ್ತಾರೆ ಥಿಯೇಟರ್ ಮಾಲೀಕರ ಸಂಘ ಫಿಯೋಕ್.
ಡಿಸೆಂಬರ್ 16 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ ಎಂದು ಘೋಷಿಸಿರುವ ಚಿತ್ರಕ್ಕಾಗಿ ಕೇರಳೀಯರು ಕಾತರದಿಂದ ಕಾಯುತ್ತಿದ್ದಾರೆ. ಅವತಾರ್ ದಿ ವೇ ಆಫ್ ವಾಟರ್ ಚಿತ್ರ 2009 ರಲ್ಲಿ ಬಿಡುಗಡೆಯಾದ ಅವತಾರ್ ನ ಉತ್ತರಭಾಗವಾಗಿದೆ. ಭಾರತದಲ್ಲಿ ಇಂಗ್ಲಿμï, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾμÉಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಈ ಪರಿಸ್ಥಿತಿಯಲ್ಲಿ ಫಿಯೋಕ್ ವಿಧಿಸಿರುವ ಚಲನಚಿತ್ರ ನಿಷೇಧ ಭ್ರಮನಿರಸಗೊಳಿಸಿದೆ.
ಕೇರಳದಲ್ಲಿ ಅವತಾರ್ ನಿಷೇಧ; ಫಿಯಾಕ್ ನಿಂದ ನಿಯಂತ್ರಣ
0
ನವೆಂಬರ್ 29, 2022