ಕಾಸರಗೋಡು: ಹೈನುಗಾರಿಕೆ ಅಭಿವೃದ್ಧಿ ಇಲಾಖೆ, ಜಿಲ್ಲಾ ಡೈರಿ ಸಹಕಾರಿ ಸಂಘಗಳು, ಮಿಲ್ಮಾ ಹಾಗೂ ಕೇರಳ ಫೀಡ್ಸ್ ವತಿಯಿಂದ ಜಿಲ್ಲಾ ಹೈನುಗಾರರ ಸಮಾವೇಶ ಡಿ. 2ರಂದು ಚಿಮೇನಿ ನಜಂದಾಡಿಯಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 10.30ಕ್ಕೆ ಪಶು ಸಂಗೋಪನಾ ಖಾತೆ ಸಚಿವೆ ಜೆ. ಚಿಂಜು ರಾಣಿ ಸಾರ್ವಜನಿಕ ಸಭೆಯನ್ನು ಉದ್ಘಾಟಿಸುವರು. ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಭಾಷಣ ಮಾಡುವರು. ಕಾರ್ಯಖ್ರಮದ ಪೂರ್ವಭಾವಿಯಾಗಿ ಡಿ.1ರಂದು ಬೆಳಗ್ಗೆ 8 ಗಂಟೆಗೆ ಸಂಘಟನಾ ಸಮಿತಿ ಅಧ್ಯಕ್ಷ ಕೆ.ಸುಧಾಕರನ್ ಧ್ವಜಾರೋಹಣ ನಡೆಸುವರು. ನಂತರ ಕಯ್ಯೂರು ಚಿಮೇನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ.ವತ್ಸಲನ್ ಅವರು ಹಾಲು ಉತ್ಪದಕರಿಗಾಗಿ ನಡೆಯುವ ಕ್ಷೀರಸಂಗಮ ಕಾರ್ಯಾಗಾರವನ್ನು ಉದ್ಘಾಟಿಸುವರು. ಈ ಸಂದರ್ಭ ಜಾನುವಾರು ಪ್ರದರ್ಶನ ಕೂಡ ನಡೆಯಲಿದೆ.
ಚಿಮೇನಿಯಲ್ಲಿ ಜಿಲ್ಲಾ ಹೈನುಗಾರರ ಸಮಾವೇಶ, ಜಾನುವಾರು ಪ್ರದರ್ಶನ
0
ನವೆಂಬರ್ 30, 2022
Tags