ಹಲಸು ಹೆಚ್ಚಿನ ಜನರ ನೆಚ್ಚಿನ ಹಣ್ಣುಗಳಲ್ಲಿ ಒಂದಾಗಿದೆ. ಹಲಸಿನ ಹಣ್ಣನ್ನು ವಿವಿಧ ಬಗೆಯಲ್ಲಿ ಬಳಸುತ್ತೇವೆ. ಎಳೆಯ ಕಾಯಿಯಿಂದ ತೊಡಗಿ ಬಲಿತು ಬಳಿಕದ ಹಣ್ಣಿನವರೆಗೂ ಹಲಸಿನ ಪ್ರತಿಯೊಂದು ವಿಭಾಗವೂ ಬಳಸುವಂತದ್ದು ನಮಗೆ ತಿಳಿದಿದೆ.
ಹಲಸಿನ ಹಣ್ಣಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಸೇರಿದಂತೆ ಹಲವು ಪ್ರಯೋಜನಗಳಿವೆ ಎಂದು ನಮಗೆ ತಿಳಿದಿದೆ. ಆದರೆ ಹಲಸಿನ ಹಣ್ಣಿನಂತೆ, ಅದರ ಎಲೆಗಳು ಸಹ ಪ್ರಯೋಜನಗಳನ್ನು ಹೊಂದಿವೆ. ಬೆಚ್ಚಿ ಬೀಳಬೇಡಿ, ಹಲಸಿನೆಲೆಗಳಿಂದ ಏನೆಲ್ಲಾ ಲಾಭಗಳಿವೆ ನೋಡೋಣ.
ಬದಲಾದ ಜೀವನಶೈಲಿ ಇಂದು ಮಕ್ಕಳನ್ನೂ ಸ್ಥೂಲಕಾಯರನ್ನಾಗಿಸಿದೆ. ಹಲಸಿನ ಎಲೆ ಹೆಚ್ಚುವರಿ ಕೊಬ್ಬು ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಲೆಯ ಪಾನೀಯವನ್ನು ಮಲಗುವ ಸಮಯದಲ್ಲಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಪ್ರಯೋಜನಕಾರಿ. ಪಲ್ಯಮಾಡಿ ಸೇವಿಸುವುದು ಸಹ ಒಳ್ಳೆಯದು. ಚಿಗುರುಗಳನ್ನು ಪಲ್ಯಕ್ಕೆ ಬಳಸಬೇಕು.
ಮಧುಮೇಹವನ್ನು ನಿಯಂತ್ರಿಸಲು ಹಲಸಿನ ಎಲೆ ಪ್ರಯೋಜನಕಾರಿಯಾಗಿದೆ. ಮಧುಮೇಹ ರೋಗಿಗಳು ಹಲಸಿನ ಎಲೆಯನ್ನು ಬೇಯಿಸಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಎಲೆಯಲ್ಲಿರುವ ಗ್ಲುಕೋಸೈಡ್ ಎಂಬ ಆ್ಯಂಟಿಆಕ್ಸಿಡೆಂಟ್ ಮಧುಮೇಹವನ್ನು ನಿಯಂತ್ರಿಸುತ್ತದೆ.
ಹೊಟ್ಟೆಯ ಕಾಯಿಲೆಗಳಿಗೆ ಅತ್ಯುತ್ತಮ ಪರಿಹಾರವಾಗಿದೆ. ಜೀರಿಗೆಯೊಂದಿಗೆ ಎಲೆಯ ತುಣುಕು ಬೆರೆಸಿ ಸೇವಿಸಿದರೆ ಗ್ಯಾಸ್ ಮತ್ತು ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುತ್ತದೆ. ತುರಿದ ಎಲೆಯನ್ನು ಜೀರಿಗೆಯೊಂದಿಗೆ ಬೆರೆಸುವುದು ಸಹ ಪ್ರಯೋಜನಕಾರಿಯಾಗಿದೆ. ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಚಯಾಪಚಯವನ್ನು ಹೆಚ್ಚಿಸಲು ಸಹ ಒಳ್ಳೆಯದು. ಗ್ಯಾಸ್ ಸಂಬಂಧಿತ ಸಮಸ್ಯೆ ಇರುವವರಿಗೆ ಒಳ್ಳೆಯದು.
ಒಸಡಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಲಸಿನ ಎಲೆ ಬಳಸಬಹುದು. ದೇಹ ಸೇರಿರುವ ವಿಷವನ್ನು ಹೊರಹಾಕುವ ಸಾಮಥ್ರ್ಯವನ್ನು ಹೊಂದಿದೆ.
ಬಾಯಿ ಹುಣ್ಣು ಅನೇಕ ಜನರನ್ನು ಕಾಡುವ ಒಂದು ಪ್ರಮುಖ ಸಮಸ್ಯೆಯಾಗಿದೆ. ಹಲವಾರು
ದಿನಗಳವರೆಗೆ ತೀವ್ರ ಅಸ್ವಸ್ಥತೆಯನ್ನು ಅನುಭವಿಸಬೇಕಾಗುತ್ತದೆ. ಹಸಿರು ಹಲಸಿನ ಎಲೆ ಒಣಗಿಸಿ ಬಳಿಕ ಪೇಸ್ಟ್ ನ್ನು ಹುಣ್ಣಿರುವ ಭಾಗಕ್ಕೆ ಅನ್ವಯಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಳನ್ನು ನುರಿತ ವೈದ್ಯರಿಂದ, ಸ್ಥಳೀಯ ನಾಡ ವೈದ್ಯರಿಂದ ಪಡೆಯಬೇಕು.
ಹಲಸಿನ ಎಲೆ ಬಿಸಾಡಬೇಡಿ: ಮಧುಮೇಹದಿಂದ ತೊಡಗಿ ಹೊಟ್ಟೆಯ ಕೊಬ್ಬಿನ ವರೆಗೆ ನಿಯಂತ್ರಣಕ್ಕಿದೆ ಔಷಧಿ
0
ನವೆಂಬರ್ 05, 2022
Tags