HEALTH TIPS

ಪಾಕ್​ ರಾಜಕಾರಣಿ-ಅಧಿಕಾರಿಗಳ ಕಂಪ್ಯೂಟರ್​ ಹ್ಯಾಕ್ ಮಾಡಿದ ಭಾರತೀಯ ಹ್ಯಾಕರ್ಸ್​!

 

           ಇಸ್ಲಾಮಾಬಾದ್​: ಇನ್ನೊಬ್ಬರ ಕಂಪ್ಯೂಟರ್​​ಗಳನ್ನು ಹ್ಯಾಕ್​ ಮಾಡಿ ಜಾಲಾಡುವಂಥದ್ದು ಆಗಾಗ ನಡೆಯುತ್ತಿರುತ್ತದೆ. ಅಂಥದ್ದೇ ಒಂದು ಹ್ಯಾಕಿಂಗ್​ಗೆ ಪಾಕಿಸ್ತಾನದ ರಾಜಕಾರಣಿಗಳು, ಅಧಿಕಾರಿಗಳು ಒಳಗಾಗಿದ್ದಾರೆ.

               ಅದರಲ್ಲೂ ಪಾಕಿಸ್ತಾನೀಯರ ಕಂಪ್ಯೂಟರ್​​ಗಳನ್ನು ಹ್ಯಾಕ್ ಮಾಡಿರುವುದು ಭಾರತೀಯ ಮೂಲದ ಕಂಪ್ಯೂಟರ್​ ಹ್ಯಾಕಿಂಗ್ ತಂಡ ಎಂಬುದೂ ಬೆಳಕಿಗೆ ಬಂದಿದೆ.

ಇಂಥದ್ದೊಂದು ಹ್ಯಾಕ್ ನಡೆದಿರುವ ಕುರಿತು ಬ್ಯೂರೋ ಆಫ್ ಇನ್​ವೆಸ್ಟಿಗೇಟಿವ್ ಜರ್ನಲಿಸಂ ವರದಿ ಮಾಡಿದೆ.

            ಇಮ್ರಾನ್ ಖಾನ್​ ಸರ್ಕಾರದಲ್ಲಿ ವಾರ್ತಾ ಸಚಿವರಾಗಿದ್ದ ಫವಾದ್​ ಚೌಧರಿ ಅವರನ ಇ-ಮೇಲ್​ ಭೇದಿಸುವ ಕೆಲಸವನ್ನು ಈ ಹ್ಯಾಕಿಂಗ್ ತಂಡ ಜ. 10ರಂದು ಮಾಡಿತ್ತು. ಅದಕ್ಕೆ ಪುರಾವೆ ಎಂಬಂತೆ ಹ್ಯಾಕರ್ಸ್​ ಆ ಸಚಿವರ ಇನ್​ಬಾಕ್ಸ್ ಸ್ಕ್ರೀನ್​ಶಾಟ್ ತೆಗೆದುಕೊಂಡಿರುವುದೂ ಬಹಿರಂಗಗೊಂಡಿದೆ. ಅದೇ ರೀತಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷ್​ರಫ್​ ಅವರನ್ನೂ ಗುರಿಯಾಗಿಸಿ ಈ ಹ್ಯಾಕಿಂಗ್ ನಡೆದಿತ್ತು ಎಂಬುದೂ ಬಹಿರಂಗಗೊಂಡಿದೆ.

               ವೈಟ್​​ಇಂಟ್​ ಎಂಬ ಹೆಸರಿನ ಹ್ಯಾಕಿಂಗ್ ಗ್ಯಾಂಗ್​ ಈ ಕಿತಾಪತಿ ಮಾಡಿದ್ದು, ಅದು ಭಾರತದ ಟೆಕ್​ಸಿಟಿ ಆಗಿರುವ ಗುರುಗ್ರಾಮದ ಅಪಾರ್ಟ್​​ಮೆಂಟ್​ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, 31 ವರ್ಷದ ಆದಿತ್ಯ ಜೈನ್​ ಎಂಬಾತ ಅದರ ಮಾಸ್ಟರ್​ಮೈಂಡ್​ ಎಂಬುದೂ ತನಿಖಾ ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries