ಸರ್ಕಾರಿ ಬ್ಯಾಂಕ್‌ಗೆ ₹ 11,000 ಕೋಟಿಗೂ ಹೆಚ್ಚು ವಂಚನೆ ಮಾಡಿ ಭಾರತದಿಂದ ಪರಾರಿಯಾಗಿರುವ ಗುಜರಾತ್‌ನ ವಜ್ರದ ಉದ್ಯಮಿ ನೀರವ್ ಮೋದಿಯನ್ನು(Nirav Modi) ಯುಕೆಯಿಂದ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯು ಇದೀಗ ಹತ್ತಿರವಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಥವಾ ಪಿಎನ್‌ಬಿಗೆ ಸಂಬಂಧಿಸಿದ ಬೃಹತ್ ವಂಚನೆ ಪ್ರಕರಣದಲ್ಲಿ ವಿಚಾರಣೆ ಎದುರಿಸಲು ಭಾರತಕ್ಕೆ ವಾಪಸ್ ಕಳುಹಿಸುವುದರ ವಿರುದ್ಧ 51 ವರ್ಷದ ಮೋದಿ ಮನವಿ ಮಾಡಿದ್ದರು.
ಲಂಡನ್ ಹೈಕೋರ್ಟ್‌ನಲ್ಲಿ ಅವರ ಮೇಲ್ಮನವಿಯು ತಿರಸ್ಕೃತಗೊಂಡಿದೆ. ಈ ವರ್ಷದ ಆರಂಭದಲ್ಲಿ ಮೇಲ್ಮನವಿಯನ್ನು ಆಲಿಸಿದ ಲಾರ್ಡ್ ಜಸ್ಟೀಸ್ ಜೆರೆಮಿ ಸ್ಟುವರ್ಟ್-ಸ್ಮಿತ್ ಮತ್ತು ನ್ಯಾಯಮೂರ್ತಿ ರಾಬರ್ಟ್ ಜೇ ಅವರು ಪರಾರಿಯಾಗಿರುವ ಉದ್ಯಮಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿಸುವ ತೀರ್ಪು ನೀಡಿದರು.